ವೀರಾಜಪೇಟೆ, ಅ. ೨: ತಾಲೂಕಿನ ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕುಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಈ ತಂಡವನ್ನು ೧೦ನೇ ತರಗತಿಯ ವಿದ್ಯಾರ್ಥಿಗಳಾದ ಶಕ್ತಿ ದೇಚಮ್ಮ, ಸಾಂಚ್ ಬೋಪಣ್ಣ ಪಿ., ಶಿಪ್ರಾ ಕಾಳಪ್ಪ ಕೆ.ಐ., ಕ್ಷಮಾ ಕಾವೇರಮ್ಮ ಪಿ.ಪಿ., ೯ನೇ ತರಗತಿ ವಿದ್ಯಾರ್ಥಿಗಳಾದ ರಶ್ಮಿ ಪೊನ್ನಮ್ಮ ಎಸ್.ಎಸ್., ಕಾಜಲ್ ಪಿ.ಸಿ., ದೀಪ್ತಿ ತಂಗಮ್ಮ ಬಿ.ಬಿ. ಸೃಷ್ಟಿ ಬಿ.ಎಸ್., ಯಶ್ಮಿತಾ ಕೆ.ಎಂ., ತನ್ಯ ರೈ ಬಿ.ಎಸ್. ಹಾಗೂ ತನಿಷ ಪಿ.ಯು. ಪ್ರತಿನಿಧಿಸಿದ್ದರು. ಇವರಿಗೆ ಶಾಲಾ ದೈಹಿಕ ಶಿಕ್ಷಕಿಯರುಗಳಾದ ಮೋನಿಕಾ ಹಾಗೂ ಲಾವಣ್ಯ ತರಬೇತಿಯನ್ನು ನೀಡಿರುತ್ತಾರೆ.

ವೀರಾಜಪೇಟೆ ತಾಲೂಕಿನ ಕೆ.ಪಿ.ಎಸ್. ಪ್ರೌಢಶಾಲೆ ಶಾಲೆಯಲ್ಲಿ ನಡೆದ ತಾಲೂಕುಮಟ್ಟದ ಕ್ರೀಡಾಕೂಟದ ಪ್ರಾಥಮಿಕ ವಿಭಾಗದ ಬಾಲಕಿಯರ ಖೋ-ಖೋ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಈ ತಂಡವನ್ನು ೬ನೇ ತರಗತಿಯ ವಿದ್ಯಾರ್ಥಿಗಳಾದ ಚಾಲ್ಸಿ ಎಂ.ಜಿ., ಶಾನ್ವಿ ಪೊನ್ನಮ್ಮ ಪಿ.ಎಸ್., ಯಾನಿ ಬೆಳ್ಳಿಯಪ್ಪ, ನಿಯತ್ತಿ ರಾಜ ಪುರೋಹಿತ್, ದಿಯಾ ಫಾತಿಮಾ ಕೆ.ಎನ್., ಲಿವ್ಯ ಕೆ.ಸಿ., ಮೋಕ್ಷಿತ ಎನ್.ಎಸ್., ೭ನೇ ತರಗತಿ ವಿದ್ಯಾರ್ಥಿಗಳಾದ ಸ್ಫೂರ್ತಿ ದೇಚಮ್ಮ, ಶತಕ ಕಾವೇರಮ್ಮ, ದೇಚಮ್ಮ ಪಿ.ಬಿ., ದೇಚಮ್ಮ ಕೆ.ಎಂ. ಹಾಗೂ ಫಿದಾ ಫಾತಿಮಾ ಪಿ.ಎಂ. ಪ್ರತಿನಿಧಿಸಿದ್ದರು.