ಮಡಿಕೇರಿ, ಅ. ೨: ನಂ. ೨೭೬೬ನೇ ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೩-೨೪ನೇ ಸಾಲಿನಲ್ಲಿ ರೂ. ೧೮.೦೨ ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇ. ೧೨ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ ಅವರು ಹೇಳಿದರು.
ಮೂರ್ನಾಡು ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಂಘದಲ್ಲಿ ೨,೧೦೮ ಸದಸ್ಯರಿದ್ದು ರೂ. ೮೧,೫೨,೭೪೦ ಗಳಷ್ಟು ಪಾಲು ಬಂಡವಾಳವಿದೆ. ಠೇವಣಿಯಲ್ಲಿ ಒಟ್ಟು ರೂ. ೫,೦೬,೦೬,೧೦೭ ಹಣವನ್ನು ಕ್ರೋಢೀಕರಿಸಲಾಗಿದೆ. ೨೦೨೩-೨೪ನೇ ಸಾಲಿನಲ್ಲಿ ರೂ. ೯,೬೨,೩೧,೮೧೮ ರೂಗಳಷ್ಟು ಕೆಸಿಸಿ ಸಾಲ ವಿತರಿಸಲಾಗಿದ್ದು, ಶೇ. ೧೦೦ರಷ್ಟು ಮರುಪಾವತಿಯಾಗಿದೆ. ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ಸಂಘವು ‘ಎ’ ಶ್ರೇಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸAಘವು ನಬಾರ್ಡ್ನಿಂದ ಮಂಜೂರಾದ ರೂ. ೨೫ ಲಕ್ಷ ಬಳಸಿಕೊಂಡು ಒಟ್ಟು ರೂ. ೪೮,೦೯,೦೦೯ ವ್ಯಯ ಮಾಡಿ ನೂತನ ಗೋದಾಮು, ಮೀಟಿಂಗ್ ಹಾಲ್ ಹಾಗೂ ಕಮಿಟಿ ಮೀಟಿಂಗ್ ಹಾಲ್ ನಿರ್ಮಾಣ ಮಾಡಿರುವುದಲ್ಲದೆ ಗ್ರಾಹಕರ ಅನುಕೂಲಕ್ಕಾಗಿ ೧೫ ಸೇಫ್ ಲಾಕರ್ ಕ್ಯಾಬಿನೆಟ್ಅನ್ನು ಅಳವಡಿಸಿದೆ ಎಂದರು. ಸದಸ್ಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಮನವಿ ಮಾಡಿದರು.
ಈ ಸಂದರ್ಭ ಸಂಘದ ವ್ಯಾಪ್ತಿಯಲ್ಲಿ ೧೦ನೇ ತರಗತಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ಬಹುಮಾನವನ್ನು ವಿತರಣೆ ಮಾಡಲಾಯಿತು.
ಸಂಘದ ಪ್ರಬಾರ ಕಾರ್ಯನಿರ್ವಹಣಾಧಿಕಾರಿ ಕೂಡಂಡ ಎಂ. ಸೋಮಣ್ಣ ಅವರು ವರದಿ ವಾಚಿಸಿ, ನಿರೂಪಿಸಿದರು. ಉಪಾಧ್ಯP್ಷÀ ವಾಂಚೀರ ರನ್ನ ಅಜಯ್ ಕುಮಾರ್ ಅವರ ವಂದನಾರ್ಪಣೆಯೊAದಿಗೆ ಸಭೆ ಮುಕ್ತಾಯವಾಯಿತು.
ಸಭೆಯಲ್ಲಿ ಸಂಘದ ಸದಸ್ಯರಾದ ನೆರವಂಡ ಅನೂಪ್ ಉತ್ತಯ್ಯ, ಕರ್ಣಯನ ಬಿ. ಪ್ರಭಾಕರ, ಚೌರೀರ ಆರ್. ಅಪ್ಪಣ್ಣ, ಚೆಟ್ಟಿಮಾಡ ಯು. ಹೇಮಮಾಲಿನಿ, ಮಂಡೇಪAಡ ತ್ಯಾಗಿ ಅಕ್ಕವ್ವ, ಸಣ್ಣಜನ ಎಂ. ವೀಣಾ, ಚೌರೀರ ಎಸ್. ಉತ್ತಪ್ಪ, ಮೇಕಂಡ ಬಿ. ಪೆಮ್ಮಯ್ಯ, ಕಡ್ಲೆರ ಕೆ. ಹರ್ಷ, ಎಂ.ಕೆ. ರಾಮಣ್ಣ, ಹೆಚ್.ಆರ್. ಗಣೇಶ್, ಡಿ.ಸಿ.ಸಿ. ಬ್ಯಾಂಕ್ನ ಮೇಲ್ವಿಚಾರಕಿ ಚುಶ್ಮಾ ನಾಗರಾಜ್ ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.