ಮಡಿಕೇರಿ, ಅ. ೧: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭಗೊAಡಿದೆ. ಅನುದಾನ ಅಂತಿಮವಾಗದ ನಡುವೆಯೂ ಗಾಂಧಿ ಮೈದಾನದಲ್ಲಿ ಕಲಾಸಂಭ್ರಮ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ತಾ. ೪ ರಿಂದ ಸಾಂಸ್ಕೃತಿಕ ವೈವಿಧ್ಯ ವೇದಿಕೆಯಲ್ಲಿ ಮೇಳೈಸಲಿದೆ.
ರಾಜ್ಯ ಸರಕಾರಿ ಸಂಸ್ಥೆಯಾದ ಎಂ.ಸಿ.ಎ. (ಮಾರ್ಕೆಟಿಂಗ್ ಕಮ್ಯುನಿಕೇಷನ್ & ಅಡ್ರ‍್ಟೆöÊಸಿಂಗ್) ಮೂಲಕ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ೫ ಸಾವಿರ ಮಂದಿ ಏಕಕಾಲದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ಜಿಲ್ಲಾಧಿಕಾರಿ, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ವೆಂಕಟ್ ರಾಜಾ ಅವರು ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ ಈ ಮುನ್ನ ಟೆಂಡರ್ ಆಹ್ವಾನಿಸಿದ್ದರು. ಟೆಂಡರ್‌ನಲ್ಲಿರುವ ಅಂಶಗಳಿಗೆ ಸರಿ ಹೊಂದುವAತೆ ಇಬ್ಬರು ವೇದಿಕೆ ನಿರ್ಮಾಣಕ್ಕೆ ಒಲವು ತೋರಿ ತಮ್ಮ ಖರ್ಚಿನ ವಿವರ ನೀಡಿ ಟೆಂಡರ್‌ನಲ್ಲಿ ಭಾಗವಹಿಸಿದ್ದರು. ಆದರೆ, ಕಳೆದ ಬಾರಿಗಿಂತ ಎರಡು ಪಟ್ಟು ಹೆಚ್ಚಿನ ಮೊತ್ತವನ್ನು ನಮೂದಾಗಿತ್ತು. ಕಳೆದ ಬಾರಿ
(ಮೊದಲ ಪುಟದಿಂದ) ರೂ. ೩೫ ಲಕ್ಷದೊಳಗೆ ವೇದಿಕೆ ಕಾರ್ಯ ಪೂರ್ಣಗೊಳಿಸಲಾಗಿತ್ತು. ಈ ಬಾರಿ ಒಬ್ಬರು ರೂ. ೬೮ ಲಕ್ಷ, ಮತ್ತೋರ್ವರು ರೂ. ೭೩ ಲಕ್ಷದ ಅಂದಾಜು ಮೊತ್ತ ನಿಗದಿಪಡಿಸಿದ್ದ ಹಿನ್ನೆಲೆ ಹೆಚ್ಚಿನ ಮೊತ್ತ ವೇದಿಕೆಗೆ ತಗುಲುತ್ತದೆ ಎಂದು ಸರಕಾರಿ ಸಂಸ್ಥೆಯಾದ ಎಂ.ಸಿ.ಎ.ಗೆ ವೇದಿಕೆಯ ನಿರ್ಮಾಣದ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.
ವೇದಿಕೆ ನಿರ್ಮಾಣದ ಒಲವು ತೋರಿ ಟೆಂಡರ್‌ನಲ್ಲಿ ಭಾಗಿಯಾಗಿದ್ದ ಸ್ಥಳೀಯ ಡೆಕೋರೇಷನ್ ಮಾಲೀಕರಿಗೆ ಮೊತ್ತ ಕಡಿಮೆಗೊಳಿಸಿ ಕಳೆದ ಬಾರಿಯ ವೇದಿಕೆ ನಿರ್ಮಾಣಕ್ಕೆ ಖರ್ಚಾದ ಹಣದ ಪ್ರಮಾಣದಲ್ಲಿ ಈ ಬಾರಿ ಮಾಡುವಂತೆ ಮನವೊಲಿಸುವ ಪ್ರಯತ್ನ ಮಾಡಿದರೂ ಅದು ಸಫಲವಾಗಲಿಲ್ಲ. ಇವೆಲ್ಲ ಕಾರಣದಿಂದ ಮಡಿಕೇರಿ ದಸರಾದ ವೇದಿಕೆ ಜವಾಬ್ದಾರಿಯನ್ನು ಚೊಚ್ಚಲ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಜಿಲ್ಲಾಡಳಿತ ಸೂಚನೆ ಅನ್ವಯ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಅರ್ಜುನ್ ಜನ್ಯ-ರಾಜೇಶ್ ಕೃಷ್ಣನ್, ಸಾಧು ಕೋಕಿಲ ಅವರ ಕಾರ್ಯಕ್ರಮದಂದು ಮತ್ತಷ್ಟು ವರ್ಣರಂಜಿತÀವಾಗಿ ಕಾರ್ಯಕ್ರಮ ರೂಪಿಸಲಾಗುವುದು. ದೀಪಾಲಂಕಾರ ಕಾರ್ಯವೂ ನಡೆಯುತ್ತಿದೆ. ಮಳೆ ಅಡಚಣೆ ಇದ್ದರೂ ಕಾರ್ಮಿಕರು ಶ್ರಮಿವಹಿಸಿ ಕೆಲಸ ಮಾಡುತ್ತಿದ್ದಾರೆ.
-ಚೇತನ್, ಇವೆಂಟ್ ಪ್ರೊಡ್ಯೂಸರ್
ಬಾರಿಗೆ ಬೆಂಗಳೂರು ಮೂಲದ ಎಂ.ಸಿ.ಎ. ಸಂಸ್ಥೆ ವಹಿಸಿಕೊಂಡಿದೆ.
ಸರಕಾರದ ವಿವಿಧ ಕಾರ್ಯ ಕ್ರಮಗಳು, ಮೈಸೂರು ದಸರಾ, ಸಾಹಿತ್ಯ ಸಮ್ಮೇಳನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ವೇದಿಕೆ ಸೇರಿದಂತೆ ರೂಪುರೇಷೆಯನ್ನು ಈ ಸಂಸ್ಥೆಯೇ ಮಾಡುತ್ತಾ ಬಂದಿದೆ.
ಅನುದಾನ ನಿಗದಿಯಾಗಿಲ್ಲ
ವೇದಿಕೆ ನಿರ್ಮಾಣಕ್ಕೆ ಅನುದಾನವನ್ನು ಇದುವರೆಗೂ ನಿಗದಿಪಡಿಸಿಲ್ಲ. ಕಳೆದ ಬಾರಿ ಖರ್ಚಾದ ಹಣದ ಪ್ರಮಾಣದ ಆಧಾರದಲ್ಲಿ ವೇದಿಕೆ ನಿರ್ಮಿಸಲು ಎಂ.ಸಿ.ಎ.ಗೆ. ಸೂಚಿಸಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ.
ಅದಲ್ಲದೆ ಸರಕಾರದಿಂದ ಅನುದಾನ ಇನ್ನೂ ಬಿಡುಗಡೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿ ವೆಂಕಟ್ ರಾಜಾ ಶೀಘ್ರದಲ್ಲಿ ಹಣ ಖಾತೆಗೆ ಬರುವ ನಿರೀಕ್ಷೆ ಇದೆ ಎಂದು ‘ಶಕ್ತಿ’ಗೆ ತಿಳಿಸಿದ್ದಾರೆ.