ಪಾಲಿಬೆಟ್ಟ, ಅ. ೨: ಇಲ್ಲಿನ ಗಣಪತಿ ಸೇವಾ ಮಿತ್ರ ಮಂಡಳಿಯ ವತಿಯಿಂದ ಗೌರಿ ಗಣೇಶ ವಿಸರ್ಜನೋತ್ಸವ ನಡೆಯಿತು. ವಿಸರ್ಜ ನೋತ್ಸವದಲ್ಲಿ ಸಂಗೀತ ರಸಮಂಜರಿ, ಡೊಳ್ಳು ಕುಣಿತ, ಕೊಡಗಿನ ವಾದ್ಯ ಗೋಷ್ಠಿ, ಗೊಂಬೆಯಾಟ ಇನ್ನು ಹಲವು ಕಾರ್ಯಕ್ರಮ ನಡೆಯಿತು. ಉತ್ಸವ ಮೂರ್ತಿಯ ಮೆರವಣಿಗೆಯ ಸಂದರ್ಭದಲ್ಲಿ ಪಾಲಿಬೆಟ್ಟದ ಜುಮ್ಮಾ ಮಸೀದಿಯ ಸದಸ್ಯರುಗಳು ಮೂರ್ತಿಯೊಂದಿಗೆ ತೆರಳುವ ಭಕ್ತಾದಿಗಳಿಗೆ ತಂಪು ಪಾನೀಯವನ್ನು ವಿತರಿಸಿದರು. ಈ ಸಂದರ್ಭ ಗಣಪತಿ ಸೇವಾ ಮಿತ್ರ ಮಂಡಳಿಯ ಅಧ್ಯಕ್ಷ ಅಜಿತ್ ಕರುಂಬಯ್ಯ, ಕಾರ್ಯದರ್ಶಿ ಕುಟ್ಟಂಡ ವಸಂತ್, ಮೂಕೋಂಡ ವಿಜು ಸುಬ್ರಮಣಿ, ಕುಪ್ಪಂಡ ಚಿಣ್ಣಪ್ಪ ಮತ್ತು ಟಿ.ಜಿ. ವಿಜೇಶ್ ಇದ್ದರು. ಪೊಲೀಸ್ ವೃತ್ತ ನಿರೀಕ್ಷಕ ರಾಜು, ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸೂಕ್ತ ಬಂದೋಬಸ್ತ್ ಕಲ್ಪಿಸಿದರು.