*ಗೋಣಿಕೊಪ್ಪ: ಕಾಫಿ ಸೇವನೆಯಿಂದ ಉತ್ತಮ ಆಲೋಚನೆಗಳು ವೃದ್ಧಿಸುತ್ತದೆ ಎಂದು ಕೂರ್ಗ್ ವುಮೆನ್ಸ್ ಕಾಫಿ ಅವರ್‌ನೆಸ್ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂತರರಾಷ್ಟಿçÃಯ ಕಾಫಿ ದಿನಾಚರಣೆಯ ಅಂಗವಾಗಿ ಕೊಡವ ಎಜುಕೇಶನ್ ಸೊಸೈಟಿ, ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ, ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ (ಸಿಡಬ್ಲೂö್ಯಸಿ) ಸಹಯೋಗದಲ್ಲಿ ಹಳ್ಳಿಗಟ್ಟು ಸಿಐಟಿ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾಫಿ ವಿತರಿಸಿ ಮಾತನಾಡಿದರು.
ಕಪ್ಪು ಕಾಫಿಯು ಹೃದಯ ಮತ್ತು ಯಕೃತ್ತಿನ ಕಾಯಿಲೆಗಳನ್ನು ದೀರ್ಘಕಾಲದವರೆಗೆ ಕಡಿಮೆ ಮಾಡಲು ಕುಡಿಯಬಹುದಾದ ಆರೋಗ್ಯಕರ ಪಾನೀಯವಾಗಿದೆ. ಚರ್ಮದ ಆರೈಕೆಗಾಗಿ ಕಾಸ್ಮೆಟಿಕ್ ಉದ್ಯಮದಲ್ಲಿ ಕಾಫಿಯನ್ನು ಸಹ ಬಳಸಲಾಗುತ್ತಿದೆ. ಯುವ ಸಮುದಾಯ ಕಾಫಿ ಸೇವನೆ ಕಡೆ ಆಕರ್ಷಿತರಾದರೆ ಕಾಫಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದರು.
ದಿನದ ವಿಶೇಷವಾಗಿ ಕಾಫಿ ಕುಡಿಯುವುದನ್ನು ಉತ್ತೇಜಿಸಲು ಕಾಫಿಯ ವಿಶೇಷ ರುಚಿಯನ್ನು ಸವಿಯಲು ೨೫೦೦ ಕಪ್ ಕಾಫಿಯನ್ನು ಉಚಿತವಾಗಿ ಕುಟ್ಟ ಹೆದ್ದಾರಿ ಪ್ರಯಾಣಿಕರಿಗೆ ಮತ್ತು ಸಿಐಟಿ ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಸದಸ್ಯ ತೇಲಪಂಡ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಶಾಧಿಕಾರಿ, ಕುಮಾರಿ ಕುಂಜಪ್ಪ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದ ಬೆಳ್ಳಿಯಪ್ಪ, ಕಾಫಿ ಬೋರ್ಡ್ ಸಹಾಯಕ ನಿರ್ದೇಶಕ ಡಾ. ಚಂದ್ರಶೇಖರ್, ಕಾಫಿ ಬೋರ್ಡ್ ಸಂಯೋಜಕ ಪಿ. ಕಿಶೋರ್ ಕುಮಾರ್, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಜೀವ್ ಕೆ.ಜಿ., ಕೊಡವ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ, ಪ್ರಾಂಶುಪಾಲ ಡಾ. ಎಂ. ಬಸವರಾಜ ಇದ್ದರು.ಸೋಮವಾರಪೇಟೆ: ಕೊಡಗು ವಿಮೆನ್ಸ್ ಕಾಫೀ ಅವೇರ್‌ನೆಸ್ ಸಂಸ್ಥೆ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಬಿಗ್ ಕಪ್ ಮಡಿಕೇರಿ, ಬೆರಿಸ್ ಅಂಡ್ ಲೀಗ್ಸ್, ಬ್ಲಾಸಮ್ ಅಗ್ರಿ ಶಾವರ್ಸ್ ಮತ್ತು ಕಾಫಿ ಬೋರ್ಡ್ ಆಫ್ ಇಂಡಿಯಾ ಇವುಗಳ ಸಹಯೋಗ ದೊಂದಿಗೆ ಅಂತರರಾಷ್ಟಿçÃಯ ಕಾಫಿ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ೯೦೦ ಕಪ್ ಕಾಫಿಯನ್ನು ಉಚಿತವಾಗಿ ವಿತರಿಸಲಾಯಿತು.
ಇಲ್ಲಿನ ಚಿಕ್ಕಬಸಪ್ಪ ಕ್ಲಬ್ ಮುಂಭಾಗದಲ್ಲಿ ಸಂಸ್ಥೆಯ ಮಹಿಳಾ ಕಾಫಿ ಬೆಳೆಗಾರರು, ತಾವೇ ಸ್ವತಃ ಬೆಳೆದ ಕಾಫಿಯನ್ನು ಸಂಸ್ಕರಿಸಿ ಸಾರ್ವಜನಿಕರಿಗೆ ಫಿಲ್ಟರ್ ಕಾಫಿಯನ್ನು ವಿತರಿಸಿದರು. ಭಾರತದ ಕಾಫಿಗೆ ಮೊದಲು ಸ್ಥಳೀಯವಾಗಿ ಮನ್ನಣೆ ದೊರಕಿಸುವ ಮೂಲಕ ಶೇಕಡಾವಾರು ಬಳಕೆದಾರರನ್ನು ಹೆಚ್ಚಿಸುವ, ಕಾಫಿ ಸೇವನೆಯನ್ನು ಉತ್ತೇಜಿಸುವ ಮೂಲಕ ಕಾಫಿ ಉದ್ಯಮವನ್ನು ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಅನಿತಾ ನಂದ ಅವರು ತಿಳಿಸಿದರು.
ಎಲ್ಲರೂ ಕಾಫಿ ಕುಡಿಯಬೇಕು. ಬೆಳೆಗಾರರು ಕಾಫಿಯನ್ನು ಮೊದಲು ಬಳಸಬೇಕು. ಭಾರತದ ಕಾಫಿ ಉದ್ಯಮ ಚೇತರಿಕೆ ಕಾಣಬೇಕು. ಈ ನಿಟ್ಟಿನಲ್ಲಿ ಸಂಸ್ಥೆಯು ಕಳೆದ ೨೦೧೬ರಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಣಿ ನರೇಂದ್ರ ಹೇಳಿದರು.
ಈ ಸಂದರ್ಭ ಸದಸ್ಯೆ ಅನುರಾಧ ವಿಕ್ರಂ, ರಾಜ್‌ಶ್ರೀ ಸದಾನಂದ್, ಪೂರ್ಣಿಮಾ ವಿರೂಪಾಕ್ಷ, ಮಾಲಾ ಮಂಜುನಾಥ್, ತನ್ಮಯಿ ಪ್ರವೀಣ್, ಅಂಪು ಮಹೇಶ್, ಜ್ಯೋತಿ ಶುಭಾಕರ್, ನಳಿನಿ ಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮುಳ್ಳೂರು: ಭಾರತದದಲ್ಲಿ ಬೆಳೆÀಯುತ್ತಿರುವ ಉತ್ಕೃಷ್ಟ ಗುಣಮಟ್ಟದ ಕಾಫಿ ಶೇ೭೦ ರಷ್ಟು ಕಾಫಿ ಉತ್ಪನ್ನ ವಿದೇಶಕ್ಕೆ ರಪ್ತಾಗುತ್ತಿದ್ದರೂ ಸಹ ಸ್ಥಳೀಯ ಮಟ್ಟದಲ್ಲಿ ಜನರು ಕಡಿಮೆ ಪ್ರಮಾಣದಲ್ಲಿ ಕಾಫಿಯನ್ನು ಸೇವಿಸುತ್ತಿರುವುದು ಕಳವಳಕಾರಿ ಯಾಗಿದೆ ಎಂದು ಸೋಮವಾರಪೇಟೆ ಕಾಫಿ ಮಂಡಳಿಯ ಹಿರಿಯ ವಿಸ್ತರಣಾಧಿಕಾರಿ ರಂಜಿತ್ ಕುಮಾರ್ ಅಭಿಪ್ರಾಯಪಟ್ಟರು.
ಶನಿವಾರಸಂತೆ ಕೆಆರ್‌ಸಿ ವೃತ್ತದಲ್ಲಿ ಕಾಫಿ ಮಂಡಳಿ ಸೋಮವಾರಪೇಟೆ ಹಾಗೂ ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟಿçÃಯ ಕಾಫಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಫಿ ಬೆಳೆಗಾರರು ಜನರು ಕಾಫಿಯನ್ನು ಸೇವಿಸುವಂತೆ ಪ್ರಚಾರದ ಮೂಲಕ ಜಾಗೃತಿ ಮೂಡಿಸಬೇಕಾಗುತ್ತದೆ. ಈ ಮೂಲಕವಾಗಿ ಸ್ಥಳೀಯ ಜನರು ಕಾಫಿಯನ್ನು ಸೇವಿಸುತ್ತಾರೆ ಜನರು ಕಾಫಿಯನ್ನು ಆರೋಗ್ಯಕರವಾದ ಪೇಯವಾಗಿ ಸೇವಿಸುವುದ್ದರಿಂದ ಕಾಫಿ ಮಾರುಕಟ್ಟೆ ಬೃಹತ್ ಉದ್ದಿಮೆಯಾಗಿ ಬೆಳೆಯುತ್ತದೆ ಬೆಳೆಗಾರರು ಗುಣಮಟ್ಟದ ಕಾಫಿಯನ್ನು ಬೆಳೆಯಬೇಕಾಗುತ್ತದೆ ಎಂದರು. ತಾ. ೬ ಮತ್ತು ೭ ರಂದು ಮಡಿಕೇರಿಯಲ್ಲಿ ನಡೆಯುವ ಕಾಫಿ ದಸರಾ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಕಾಫಿ ಬೆಳೆಗಾರರು ಪಾಲ್ಗೊಂಡು ಕಾಫಿ ಉತ್ಪನ್ನವನ್ನು ಪ್ರಚಾರಗೊಳಿಸಲು ಭಾಗಿಯಾಗುವಂತೆ ಮನವಿ ಮಾಡಿದರು. ಕಾಫಿ ಮಂಡಳಿಯ ಮತ್ತೊರ್ವ ಹಿರಿಯ ವಿಸ್ತರಣಾಧಿಕಾರಿ ಲಕ್ಷಿö್ಮಕಾಂತ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯ ಚಂದ್ರಕಾAತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ವಿ.ಎಲ್.ವರ್ಷಿತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಶ್ವೇತ ವಸಂತ್, ಕಾಫಿ ಬೆಳೆಗಾರ ಎಚ್.ವಿ.ದಿವಾಕರ್, ಕಾರ್ಯಕ್ರಮ ಆಯೋಜಕ ಕೆ.ಸಿ.ಅಶೋಕ್ ಮುಂತಾದವರಿದ್ದರು. ದಿನದ ಅಂಗವಾಗಿ ಸಾರ್ವಜನಿಕರಿಗೆ ಕಾಫಿ ಪೇಯವನ್ನು ವಿತರಿಸಲಾಯಿತು.