ಚೆಯ್ಯಂಡಾಣೆ, ಅ. ೨: ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಕರಾಟೆ ಇಂಡಿಯಾ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಜಡ್ಜ್ -ಬಿ ಪರೀಕ್ಷೆಯಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ದ್ವಿತೀಯ ಬಿಕಾಂ ವಿದ್ಯಾರ್ಥಿ ನೆಲಜಿ ಗ್ರಾಮದ ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ ಉತ್ತೀರ್ಣರಾಗಿದ್ದಾರೆ. ನಾಪೋಕ್ಲು ಬಳಿಯ ನೆಲಜಿ ಗ್ರಾಮದ ಚೆಟ್ಟಿಯಾರಂಡ ಮನು, ಪವಿತಾ ದಂಪತಿಯ ಪುತ್ರನಾಗಿರುವ ದಿಲನ್ ತಿಮ್ಮಯ್ಯ ಕರಾಟೆ ಮಾಸ್ಟರ್ ಸೆನ್ಸಾಯಿ ನಾಗೇಂದ್ರ ಅವರ ಶಿಷ್ಯನಾಗಿದ್ದಾನೆ.