ನಾಪೋಕ್ಲು, ಸೆ. ೩೦: ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ವೀರಾಜಪೇಟೆಯ ಆಂಜನೇಯ ದೇವಾಲಯದ ಸಮೀಪದ ಸಭಾಭವನದಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಪಿ.ಎನ್. ಹರಿಶಂಕರ್ ಪ್ರಸಾದ್ ಮಾತನಾಡಿ, ಸಂಘದ ಬೆಳವಣಿಗೆಗೆ ಸದಸ್ಯರು ಶ್ರಮಿಸಬೇಕು ಎಂದರು. ಕಾರ್ಯಕ್ರಮ ದಲ್ಲಿ ಅಧಿಕ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಸಲಹೆ-ಸೂಚನೆಗಳನ್ನು ನೀಡಿದರು.

ಉಪಾಧ್ಯಕ್ಷ ಎಂ.ಎಸ್. ಸುಧೀರ್ ಕುಮಾರ್, ನಿರ್ದೇಶಕರಾದ ಪಿ.ಎನ್. ನಾಗರಾಜ್, ಎ.ವಿ. ಮಂಜುನಾಥ್, ಎಸ್.ಯು. ಪಾರ್ವತಿ, ಎಂ.ಜಿ. ರಾಮಪ್ರಸಾದ್, ಕೆ.ಆರ್. ರಂಜಿತ್, ಎನ್.ಎಸ್. ಉದಯ ಶಂಕರ್, ಎಸ್.ಎಸ್. ಮೀನಾಕ್ಷಿ, ಸಿ.ಎಸ್. ಸುರೇಶ್, ಕೆ.ಎಸ್. ಮಂಜುನಾಥ್, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ರಾಮು ಮೂಗೂರು, ಮಾಜಿ ಅಧ್ಯಕ್ಷೆ ಗೀತಾ ಗಿರೀಶ್ ಉಪಸ್ಥಿತರಿದ್ದರು.