ಮಡಿಕೇರಿ, ಸೆ. ೩೦: ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್) ನಿರಂತರವಾಗಿ ಕಳೆದ ೧೮ ವರ್ಷಗಳಿಂದ ಲಾಭದಲ್ಲಿದ್ದು, ೩ನೆ ಬಾರಿಗೆ ' ಅತ್ಯುತ್ತಮ ಬ್ಯಾಂಕ್' ರಾಜ್ಯ ಪ್ರಶಸ್ತಿಯನ್ನು ಪಡೆದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು ಮಾಹಿತಿ ನೀಡಿದರು. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇತ್ತೀಚೆಗೆ ಕಾಸ್ಕಾರ್ಡ್ ಬ್ಯಾಂಕಿನ ಮಹಾಸಭೆಯಲ್ಲಿ ರಾಜ್ಯದ ೧೮೧ ಬ್ಯಾಂಕುಗಳ ಪೈಕಿ ಮಡಿಕೇರಿ ಪಿಕಾರ್ಡ್ ಬ್ಯಾಂಕಿಗೆ ಈ ಸಾಲಿನ ಅತ್ಯುತ್ತಮ ಬ್ಯಾಂಕ್ ಎಂದು ಸನ್ಮಾನ ಮಾಡಲಾಯಿತು. ಜಿಲ್ಲಾ ಮಟ್ಟದಲ್ಲಿಯೂ ಪಿಕಾರ್ಡ್ ನಿರಂತರವಾಗಿ ಪ್ರಶಸ್ತಿ ಪಡೆಯುತ್ತ ಬಂದಿದೆ ಎಂದರು. ೧೯೫೭ ರಲ್ಲಿ ಪ್ರಾರಂಭವಾದ ಬ್ಯಾಂಕ್ ಜಿಲ್ಲೆಯ ಜಮ್ಮಾ ಹಿಡುವಳಿದಾರರಿಗೆ ಸಾಲವನ್ನು ನೀಡುವ ವ್ಯವಸ್ಥೆಯನ್ನು ಮೊದಲಿಗೆ ಪ್ರಾರಂಭಿಸಿತು. ಎಲ್ಲ ರೀತಿಯ ಬೆಳೆಗಾರರಿಗೆ ನಿರಂತರವಾಗಿ ಸಾಲವನ್ನು ವಿತರಿಸುತ್ತಾ ಬಂದಿರುವ ಬ್ಯಾಂಕ್ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು. ಪ್ರತಿ ಸಾಲು ಮಾರ್ಚ್ ೩೧ ರೊಳಗೆ ಸಾಲ ತೀರಿಸಿದರೆ ಬಡ್ಡಿಯಲ್ಲಿ ಶೇ ೨ ರಷ್ಟು ರಿಯಾಯಿತಿ ನೀಡಲಾಗುವುದು. ಇಡೀ ರಾಜ್ಯದಲ್ಲಿ ನಮ್ಮ ಬ್ಯಾಂಕ್ ಮಾತ್ರ ಈ ಅವಕಾಶ ನೀಡುತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್, ರೂ.೨ ಕೋಟಿ ೩೨ ಲಕ್ಷ ೪೬ ಸಾವಿರದ ೧೭೮ ರಷ್ಟು ಲಾಭಗಳಿಸಿದೆ. ರೂ.೭೦,೨೨,೫೭,೪೫೨ ವ್ಯವಹಾರ ಮಾಡಿದೆ. ಬ್ಯಾಂಕಿನಲ್ಲಿ ಠೇವಣಿ ರೂ.೯,೧೭,೮೮,೩೭೬ ಠೇವಣಿ ಸಂಗ್ರಹವಾಗಿದೆ. ಹಾಗೆಯೇ ಸಾಲದ ಹೊರಬಾಕಿ ರೂ.೧೯,೯೮,೯೨,೨೨೨ ಇರುತ್ತದೆ ಎಂದರು. ಬ್ಯಾಂಕ್ ಸತತವಾಗಿ ಹದಿನೆಂಟು ವರ್ಷಗಳಿಂದ ಲಾಭದಲ್ಲಿದ್ದು, ಸದಸ್ಯರಿಗೆ ಶೇ.೮ ರಷ್ಟು ಡಿವಿಡೆಂಟ್ ನೀಡಿರುತ್ತೇವೆ. ಇಂದು ಬ್ಯಾಂಕಿನಲ್ಲಿ ೨,೬೭೨ ಸದಸ್ಯರಿದ್ದು ಪಾಲು ಬಂಡವಾಳ ರೂ.೧೩೪.೩೩ ಲಕ್ಷ ಇದೆ ಎಂದು ಅವರು ಮಾಹಿತಿ ನೀಡಿದರು.
ಪ್ರತಿವರ್ಷ ಸಾಲ ಪಡೆದ ರೈತ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ರಾಜ್ಯ ಪ್ರಶಸ್ತಿ ಸ್ವೀಕಾರ ಸಂದರ್ಭ ಕಾಸ್ಕಾರ್ಡ್ ಬ್ಯಾಂಕ್ನ ಅಧ್ಯಕ್ಷ ಹಾಗೂ ಶಾಸಕ ಕೆ. ಷಡಕ್ಷರಿ,
(ಮೊದಲ ಪುಟದಿಂದ) ನಿರ್ದೇಶಕರಾಗಿರುವ ಶಾಸಕ ಎ. ಮಂಜು, ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಹಾಜರಿದ್ದರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಕುಂಡ್ಯೋಳAಡ ರಮೇಶ್, ನಿರ್ದೇಶಕ ನಾಪಂಡ ರ್ಯಾಲಿ ಮಾದಯ್ಯ, ಮಂಡೀರ ಹೇಮಾ ನಂಜಪ್ಪ, ಕೂರನ ಸುಶೀಲ, ವ್ಯವಸ್ಥಾಪಕ ಚಂದ್ರಶೇಖರ್ ಹಾಜರಿದ್ದರು.