ಕಣಿವೆ, ಸೆ. ೩೦: ಜಿಲ್ಲೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಸಂಸ್ಥೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಾಗಿದ್ದು ನಿವೃತ್ತ ಶಿಕ್ಷಕರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಕುಶಾಲನಗರದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸದಾಶಿವ ಪಲ್ಲೇದ್ ಹೇಳಿದರು.

ಮುಳ್ಳುಸೋಗೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಗಳಿಗಾಗಿ ಹಮ್ಮಿಕೊಂಡಿದ್ದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಹಾಗೂ ಕೊಡಗಿನಲ್ಲಿ ಜಲಪ್ರವಾಹದ ಸಂದರ್ಭಗಳಲ್ಲಿ ಇಡೀ ಜಿಲ್ಲೆಯಲ್ಲಿ ಹೆಚ್ಚು ಸೇವೆ ಮಾಡಿರುವ ಸಂಸ್ಥೆ ಇದಾಗಿದೆ ಎಂದು ಹೇಳಿದರು.

ಕುಶಾಲನಗರ ತಾಲೂಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷ ದೇವರಗುಂಡ ಡಾ. ಪ್ರವೀಣ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ಸಹಾಯಕ ಆಯುಕ್ತ ಟಿ.ಜಿ. ಪ್ರೇಮಕುಮಾರ್, ಕಾರ್ಯದರ್ಶಿ ವಾಸಂತಿ, ದಮಯಂತಿ, ಸುಲೋಚನಾ, ಶಾಲಾ ಮುಖ್ಯ ಶಿಕ್ಷಕಿ ಭಾಗ್ಯ, ನಿವೃತ್ತ ಶಿಕ್ಷಕರಾದ ಇಂದಿರಾ ಮುತ್ತಣ್ಣ, ಎ.ಸಿ. ಶಾಂತಿ, ಕೆ.ಆರ್. ರೋಹಿಣಿ, ತಮ್ಮಯ್ಯ, ನಿವೃತ್ತ ಯೋಧ ನರೇಶ್ ಇದ್ದರು. ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ತಂಡದಿAದ ಸಾಮೂಹಿಕ ದೇಶ ಭಕ್ತಿ ಗೀತೆಗಳು ಮೊಳಗಿದವು.