ಮಡಿಕೇರಿ, ಸೆ. ೩೦: ಹಿಂದೂ ಸಮಾಜದ ದೇವಾಲಯಗಳು ಹಾಗೂ ಪೂಜಾ ಮಂದಿರಗಳ ಮುಖಾಂತರ ಸಮಾಜದಲ್ಲಿ ಏಕತೆ ಸಾರುವುದರೊಂದಿಗೆ ಸನಾತನ ಧರ್ಮ ವಿರೋಧಿ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಒಂದು ದಿನದ ಚಿಂತನ ಸಭೆಯನ್ನು ವಿಶ್ವ ಹಿಂದೂ ಪರಿಷತ್ ಕೊಡಗು ಘಟಕದಿಂದ ಏರ್ಪಡಿಸಲಾಗಿದೆ. ಸಭೆಯು ತಾ.೧ ರಂದು(ಇAದು) ಬೆಳಿಗ್ಗೆ ೧೦:೩೦ ಗಂಟೆಗೆ ವೀರಾಜಪೇಟೆ ಕಾಕೋಟುಪರಂಬುವಿನ ಶ್ರೀ ಕಾಲ ಭೈರವ ದೇವಾಲಯದಲ್ಲಿ ನಡೆಯಲಿದೆ.