ಸೋಮವಾರಪೇಟೆ, ಅ. ೧: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದ ಶ್ರೀ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ತಾ. ೩ರಿಂದ ೧೨ರವರೆಗೆ ೧೭ನೇ ವರ್ಷದ ಶರನ್ನವರಾತ್ರಿ ಉತ್ಸವ ಆಯೋಜಿಸಲಾಗಿದೆ ಎಂದು ದೇವಾಲಯ ಸಮಿತಿ ಉಪಾಧ್ಯಕ್ಷ ಎಸ್.ಆರ್. ಸೋಮೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅ. ೩ರಂದು ಬೆಳಿಗ್ಗೆ ೭ಕ್ಕೆ ಶ್ರೀ ಪಾರ್ವತಿ ದೇವಿ ವಿಗ್ರಹವನ್ನು ಆನೆಕೆರೆಯಲ್ಲಿ ಗಂಗೆ ಪೂಜೆಯ ನಂತರ ದೇವಾಲಯಕ್ಕೆ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಲಾಗುವುದು. ಪಾರ್ವತಿ ದೇವಿಗೆ ಪುಷ್ಪಾಲಂಕಾರ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.
ತಾ. ೪ರಂದು ಹರಿದ್ರಾಲಂಕಾರ, ೫ರಂದು ಕುಂಕುಮಾಲAಕಾರ, ೬ರಂದು ಗಂಧದ ಅಲಂಕಾರ, ೭ರಂದು ಮುತ್ತಿನ ಅಲಂಕಾರ, ತಾ. ೮ರಂದು ಬೆಣ್ಣೆ ಅಲಂಕಾರ, ೯ರಂದು ಬೆಳಿಗ್ಗೆ ೮.೩೦ರಿಂದ ೧೦ರ ವರೆಗೆ ಸರಸ್ವತಿ ಪೂಜೆ ಹಾಗೂ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ. ಸಂಜೆ ಪಾರ್ವತಿ ದೇವಿಗೆ ಮಲ್ಲಿಗೆ ಮೊಗ್ಗಿನ ಅಲಂಕಾರ, ತಾ. ೧೦ರಂದು ಬೆಳಿಗ್ಗೆ ೭ರಿಂದ ವಿಶೇಷ ಪೂಜೆ, ೯ ಗಂಟೆಯಿAದ ಪಾರ್ವತಿ ದೇವಿಗೆ ದುರ್ಗಾ ಅಲಂಕಾರ, ದುರ್ಗಾ ಹೋಮ ನಡೆಯಲಿದೆ. ತಾ. ೧೧ರಂದು ದಾಳಿಂಬೆ ಅಲಂಕಾರ ಹಾಗೂ ವಿಶೇಷ ಪೂಜೆ ಜರುಗಲಿದೆ ಎಂದು ಮಾಹಿತಿ ನೀಡಿದರು.
ತಾ. ೧೨ರಂದು ದಶಮಿ ಪ್ರಯುಕ್ತ ಬೆಳಿಗ್ಗೆ ೧೦. ೪೫ಕ್ಕೆ ದೇವಿಯ ಸಡಿಲಿಕೆ ನಂತರ ಸೌಲಕ್ಕಿ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ ೨ ಗಂಟೆಗೆ ದೇವಿಯ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿರಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಡೊಳ್ಳು ಕುಣಿತ, ಪೂಜಾ ಕುಣಿತ ಹಾಗೂ ವೀರಗಾಸೆ ಕಲಾ ತಂಡಗಳೊAದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯ ನಂತರ ಆನೆಕೆರೆಯ ಬಳಿ ಸ್ನೇಹಧ್ಯೋತಕವಾಗಿ ಬನ್ನಿ ಹಂಚಿ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ದಿನೇಶ್ ಹಾಲೇರಿ ಹಾಗೂ ಜಗದೀಶ್ ಇದ್ದರು.