ಮಡಿಕೇರಿ, ಅ. ೧ : ಮಡಿಕೇರಿ ದಸರಾ ಪ್ರಯುಕ್ತ ೪ ಶಕ್ತಿ ದೇವತೆಗಳ ಕರಗ ಮಹೋತ್ಸವ ಕಾರ್ಯಕ್ರಮ ನಗರದಲ್ಲಿ ನಡೆಯುವುದರಿಂದ ಸಂಚಾರಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ತಾ. ೩ರಂದು ಕರಗ ಮಹೋತ್ಸವ ನಡೆಯುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಕಲ್ಪಿಸುವ ನಿಟ್ಟಿನಲ್ಲಿ ತಾ. ೩ರಂದು ಬೆಳಿಗ್ಗೆಯಿಂದಲೇ ಪಂಪಿನ ಕೆರೆಯಿಂದ ಎವಿ ಸಾಲೆ ಜಂಕ್ಷನ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲುಗಡೆಯನ್ನು ತಾತ್ಕಾಲಿಕವಾಗಿ ಸಂಪೂರ್ಣ ನಿಷೇಧಿಸಲಾಗಿದೆ. ಎವಿ ಶಾಲಾ ಜಂಕ್ಷನ್‌ನಿAದ ಚೌಕಿ ವೃತ್ತದವರಗೆ ರಸ್ತೆಯ ಎಡ ಭಾಗದಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಚೌಕಿ ವೃತ್ತದಿಂದ ಕಾಲೇಜು ರಸ್ತೆ ಮಾರ್ಗವಾಗಿ ರಾಮಮಂದಿರ ದೇವಾಲಯದವರೆಗೆ ಸಂಜೆ ೬ ಗಂಟೆಯ ನಂತರ ರಸ್ತೆಯ ಎರಡು ಭಾಗದಲ್ಲಿಯೂ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸಂಚಾರಿ ಪೊಲೀಸ್ ಠಾಣೆ ಪ್ರಕಟಣೆ ಮೂಲಕ ತಿಳಿಸಿದೆ.