ಮಡಿಕೇರಿ, ಅ. ೧: ನವರಾತ್ರಿ ಅಂಗವಾಗಿ ತಾಳತ್ತಮನೆ ದುರ್ಗಾ ಭಗವತಿ ದೇವಾಲಯದಲ್ಲಿ ತಾ.೩ ರಿಂದ ತಾ.೧೨ ರವರೆಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ. ಈ ದಿನಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆಗೆ ಅಲಂಕಾರ ಪೂಜಾ ಸೇವೆ ನಡೆಯಲಿದೆ. ತಾ.೪ ರಂದು ಶುಕ್ರವಾರ ಸಂಜೆ ೭ ಗಂಟೆಗೆ ವಿಶೇಷ ದುರ್ಗಾಪೂಜೆ ನಡೆಯಲಿದೆ. ತಾ. ೧೧ ರ ದುರ್ಗಾಷ್ಟಮಿಯಂದು ಬೆಳಿಗ್ಗೆ ಗಣಪತಿ ಹೋಮ ಹಾಗೂ ದುರ್ಗಾ ಹವನ ನಡೆಯಲಿದೆ. ನಂತರ ಅನ್ನದಾನ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.