ವೀರಾಜಪೇಟೆ, ಸೆ. ೩೦: ವೀರಾಜಪೇಟೆ ಕೊಡವ ಸಮಾಜದ ವತಿಯಿಂದ ಕೈಲ್‌ಪೊಳ್ದ್ ಕ್ರೀಡಾಕೂಟ ಜರುಗಿತು. ಕೈಲ್‌ಪೊಳ್ದ್ ಕ್ರೀಡಾಕೂಟ ಕ್ರೀಡಾ ಕಾರ್ಯದರ್ಶಿ ಅಮ್ಮಣಿಚಂಡ ರತ್ನ ಸುಬ್ರಮಣಿ ಮತ್ತು ನಿರ್ದೇಶಕರಾದ ಪುಲಿಯಂಡ ಎ. ಪೊನ್ನಣ್ಣ ಅವರ ನೇತೃತ್ವದಲ್ಲಿ ಸ್ಪರ್ಧೆ ನಡೆಯಿತು.

ಬೆಳ್ಳಿ ರೋಲಿಂಗ್ ಟ್ರೋಫಿ ದಾನಿಗಳಾದ ಪಟ್ಟಡ ದರ್ಶನ್ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ತೆಂಗಿನಕಾಯಿಗೆ ಗುಂಡು ಹೊಡೆಯುವುದು ಪುರುಷ ಮತ್ತು ಮಹಿಳೆಯರಿಗೆ ತೆಂಗಿನಕಾಯಿಗೆ ಕಲ್ಲು ಎಸೆಯುವುದು, ಬಾರದ ಗುಂಡು ಎಸೆತ ಪ್ರತ್ಯೇಕ ಸ್ಪರ್ಧೆ, ಮಕ್ಕಳಿಗೆ ಬರ್ನಿಂಗ್ ಟ್ರೇನ್, ಕಾಳು ಹೆಕ್ಕುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ವಾಲಗತ್ತಾಟ್ ಸ್ಪರ್ಧೆ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಸಮಾಜದ ವತಿಯಿಂದ ನಗದು ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ವೀರಾಜಪೇಟೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್‌ಸ್ವಾಗತಿಸಿ ವಂದಿಸಿದರು. ಕೈಲ್‌ಪೊಳ್ದ್ ಒತ್ತೊರ್ಮೆ ಕ್ರೀಡಾ ಕೂಟ ಸಂಧರ್ಭದಲ್ಲಿ ಕೊಡವ ಸಮಾಜ ವೀರಾಜಪೇಟೆಯ ನಿರ್ದೇಶಕರುಗಳು, ಸದಸ್ಯರು ಜನಾಂಗ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.