ಮಡಿಕೇರಿ, ಸೆ. ೨೯: ಅಖಿಲ ಭಾರತ ಸಂತ ಸಮಿತಿಯ ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ಕೊಡಗಿನ ಸಿದ್ಧಲಿಂಗಪುರದ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದ ರಾಜೇಶ್‌ನಾಥ ಗುರೂಜಿ ಅವರು ನಿಯುಕ್ತಿಗೊಂಡಿದ್ದಾರೆ.

ಹಾಲಿ ಕೊಡಗು ಜಿಲ್ಲಾ ಅಧ್ಯಕ್ಷರಾಗಿರುವ ರಾಜೇಶ್‌ನಾಥ್ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಸಹ ಕಾರ್ಯದರ್ಶಿಯಾಗಿ ಸೋಮವಾರಪೇಟೆ ವಿರಕ್ತಮಠದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಅವರು ನೇಮಕಗೊಂಡಿದ್ದಾರೆ. ಅಲ್ಲದೆ ಕೊಡಗಿನ ಧಾರ್ಮಿಕ ಚಿಂತಕ ಚಿ.ನಾ. ಸೋಮೇಶ್ ಅವರು ಎಂ.ಬಿ.ಎಸ್.ಎಸ್. ಸಂಚಲನ ಕಾರ್ಯದರ್ಶಿ ಆಗಿ ನಿಯುಕ್ತಿಗೊಂಡಿದ್ದಾರೆ. ತಾ. ೧೯ ರಂದು ಮಂಗಳೂರಿನ ಓಂ ಶ್ರೀ ಮಠದಲ್ಲಿ ನಡೆದ ಅಖಿಲ ಭಾರತ ಸಂತ ಸಮಿತಿಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ನಿಯುಕ್ತಿಯೊಂದಿಗೆ ಪ್ರತಿಜ್ಞೆ ಬೋಧಿಸಲಾಯಿತು.

ಎಂ.ಬಿ.ಎಸ್.ಎಸ್. ಕರ್ನಾಟಕ ರಾಜ್ಯ ಅಧ್ಯಕ್ಷ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ್ ಡಾ. ವಾಮನ ಶೆಣೈ ಸೇರಿದಂತೆ ಅನೇಕ ಸಂತರು, ಧಾರ್ಮಿಕ ಪ್ರಮುಖರು ಪಾಲ್ಗೊಂಡಿದ್ದರು.