ಕಣಿವೆ, ಸೆ. ೩೦: ಗೊಂದಿಬಸವನ ಹಳ್ಳಿ ಗ್ರಾಮದಲ್ಲಿ ರೂ. ೨೭ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.
ಈ ಸಂದರ್ಭ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಪುರಸಭೆ ಅಧ್ಯಕ್ಷ ಖಲೀಮುಲ್ಲಾ, ಜಗದೀಶ್, ಪ್ರಕಾಶ್ ಮೊದಲಾದವರಿದ್ದರು.