ಮಡಿಕೇರಿ, ಸೆ. ೩೦: ಮಡಿಕೇರಿ ದಸರಾ ಪ್ರಯುಕ್ತ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಜಿಲ್ಲಾ ಮಟ್ಟದ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿದೆ ಎಂದು ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ಅವರು ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ, ಸಾರ್ವಜನಿಕ ಪುರುಷ-ಮಹಿಳೆಯರಿಗೆ ವಿವಿಧ ವಿಭಾಗಗಳಲ್ಲಿ ರಸ್ತೆ ಓಟ, ಬಾಸ್ಕೆಟ್ ಬಾಲ್, ಫುಟ್ಬಾಲ್, ಮನರಂಜನಾ ಕ್ರೀಡೆಗಳು, ಹಗ್ಗ ಜಗ್ಗಾಟ, ಥ್ರೋ ಬಾಲ್, ವಾಲಿಬಾಲ್, ಕಬಡ್ಡಿ, ಕ್ರಿಕೆಟ್ ಸೇರಿದಂತೆ ಒಳಾಂಗಣ ಕ್ರೀಡೆಗಳನ್ನೂ ಏರ್ಪಡಿಸಲಾಗಿದೆ ಎಂದು ಅವರು ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದರು. ಕ್ರೀಡಾಪಟುಗಳಿಗೆ ಪ್ರತಿನಿತ್ಯ ಊಟದ ವ್ಯವಸ್ಥೆಯು ಇರುವುದಾಗಿ ಇದೇ ಸಂದರ್ಭ ಅವರು ಮಾಹಿತಿ ನೀಡಿದರು. ಕಬಡ್ಡಿ ಹಾಗೂ ಫುಟ್ಬಾಲ್ನಲ್ಲಿ ವಿಜೇತರಾದವರಿಗೆ ಟ್ರೋಫಿಗಳೊಂದಿಗೆ ನಗದು ಬಹುಮಾನ ದೊರಕಲಿದೆ. ಇತರ ಕ್ರೀಡೆಗಳಲ್ಲಿ ಗೆದ್ದವರಿಗೆ ಟ್ರೋಫಿಗಳು ದೊರಕಲಿದೆ ಎಂದು ಅವರು ಹೇಳಿದರು. ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು, ನೋಂದಣಿ ಮಾಡಿ ಕೊಳ್ಳಲು ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ(೭೩೩೮೫೪೭೮೯೭), ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್(೯೭೩೧೦೦೯೮೪೧), ಉಪಾಧ್ಯಕ್ಷ ರೌಫ್(೯೧೪೧೫೧೩೧೮೭), ಕಾರ್ಯದರ್ಶಿ ಸುರ್ಜಿತ್ (೯೫೩೮೧೫೬೬೬೩), ಗೌರವ ಸಲಹೆಗಾರ ದೇವರಾಜ್ (೯೪೪೮೬೪೭೧೬೧), ಸದಸ್ಯ ನಿರಂಜನ್ (೯೧೪೮೦೪೪೬೧೪) ಅವರುಗಳನ್ನು ಸಂಪರ್ಕಿಸಬಹುದಾಗಿದೆ.
ಕ್ರೀಡೆಗಳ ವಿವರ
ತಾ.೫ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬಾಸ್ಕೆಟ್ಬಾಲ್ ಮತ್ತು ಫುಟ್ಬಾಲ್ ಪಂದ್ಯಾವಳಿಗಳು ನಡೆಯಲಿವೆ. ಪುರುಷರ ವಿಭಾಗದಲ್ಲಿ ಬಾಸ್ಕೆಟ್ಬಾಲ್ ನಡೆಯಲಿದ್ದು, ೫+೨ ಶೈಲಿಯಲ್ಲಿ ಫುಟ್ಬಾಲ್ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಫುಟ್ಬಾಲ್ನಲ್ಲಿ ಗೆಲ್ಲುವ ತಂಡಕ್ಕೆ ರೂ.೧೫,೦೦೦ ಹಾಗೂ ೨ನೆ ಬಹುಮಾನ ಪಡೆಯುವ ತಂಡಕ್ಕೆ ರೂ.೧೦,೦೦೦ ನಗದು ಬಹುಮಾನ ದೊರಕಲಿದೆ.
ತಾ.೫ ರಂದು ರಸ್ತೆ ಓಟ (ಸಮಯ ಬೆಳಿಗ್ಗೆ ೬:೩೦)
್ಡ ಪುರುಷರು - ಜನರಲ್ ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್ವರೆಗೆ
್ಡ ಮಹಿಳೆಯರು - ಜನರಲ್ ತಿಮ್ಮಯ್ಯ ವೃತ್ತದಿಂದ ನೀರುಕೊಲ್ಲಿವರೆಗೆ
್ಡ ೧-೪ನೆ ತರಗತಿ ವಿದ್ಯಾರ್ಥಿಗಳಿಗೆ - ಜನರಲ್ ತಿಮ್ಮಯ್ಯ ವೃತ್ತದಿಂದ ಆಸ್ಪತ್ರೆ ಗೇಟ್ವರೆಗೆ
್ಡ ೫-೭ನೆ ತರಗತಿ ವಿದ್ಯಾರ್ಥಿಗಳಿಗೆ - ಜನರಲ್ ತಿಮ್ಮಯ್ಯ ವೃತ್ತದಿಂದ ಹೊಟೇಲ್ ಓಲ್ಡ್ ಈಸ್ಟ್ ಎಂಡ್ವರೆಗೆ
್ಡ ೮-೧೦ನೆ ತರಗತಿ ವಿದ್ಯಾರ್ಥಿಗಳಿಗೆ - ಜನರಲ್ ತಿಮ್ಮಯ್ಯ ವೃತ್ತದಿಂದ ಬಸ್ ಡಿಪೋವರೆಗೆ
್ಡ ಪಿಯುಸಿ ವಿದ್ಯಾರ್ಥಿಗಳಿಗೆ - ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ ಕಾರ್ಯಪ್ಪ ವೃತ್ತದವರೆಗೆ
ವಿಶೇಷಚೇತನರಿಗೆ ತಾ.೬ ರಂದು ಕ್ರೀಡಾಕೂಟ
ವಿಶೇಷಚೇತನರಿಗೆ ೧೦೦ ಮೀಟರ್ ಓಟದ ಸ್ಪರ್ಧೆ ೧ ರಿಂದ ೪ನೆ ತರಗತಿ ವಿದ್ಯಾರ್ಥಿಗಳಿಗೆ, ೫ ರಿಂದ ೮ನೆ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ೮ ರಿಂದ ೧೦ನೆ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ವಿಶೇಷಚೇತನರಿಗೆ ತಾ.೬ ರಂದು ಕ್ರೀಡಾಕೂಟ
ವಿಶೇಷಚೇತನರಿಗೆ ೧೦೦ ಮೀಟರ್ ಓಟದ ಸ್ಪರ್ಧೆ ೧ ರಿಂದ ೪ನೆ ತರಗತಿ ವಿದ್ಯಾರ್ಥಿಗಳಿಗೆ, ೫ ರಿಂದ ೮ನೆ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ೮ ರಿಂದ ೧೦ನೆ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಬಡ್ಡಿ ವಿಜೇತ ತಂಡಕ್ಕೆ ರೂ.೨೫ ಸಾವಿರ
ತಾ.೧೦ ರಂದು ಪುರುಷರ ಹಾಗೂ ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾಟ ಗಾಂಧಿ ಮ್ಯದಾನದಲ್ಲಿ ನಡೆಯಲಿದೆ. ಗೆದ್ದ ತಂಡಕ್ಕೆ ರೂ.೨೫ ಸಾವಿರ ನಗದು ಹಾಗೂ ಟ್ರೋಫಿ, ೨ನೆ ಬಹುಮಾನ ಪಡೆಯುವ ತಂಡಕ್ಕೆ ರೂ.೧೨ ಸಾವಿರ, ೩ ಹಾಗೂ ೪ನೆ ಬಹುಮಾನ ಪಡೆಯುವ ತಂಡಗಳಿಗೆ ತಲಾ ರೂ.೩ ಸಾವಿರ ನಗದು ಬಹುಮಾನ ನೀಡಲಾಗುವುದು.
ತಾ.೭ ರಂದು ತಾಲೂಕು ಮಟ್ಟದ ಕ್ರಿಕೆಟ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ
ತಂಡಗಳು: ದಸರಾ ಕ್ರಿಡಾ ಸಮಿತಿ, ಮಡಿಕೇರಿ ದಸರಾ ಸಮಿತಿ (ದಶ ಮಂಟಪ ಸಮಿತಿ), ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ, ಪೊಲೀಸ್ ಇಲಾಖೆ, ಶಿಕ್ಷಕರು, ವಕೀಲರು, ಮೆಡಿಕಲ್, ಜಿಲ್ಲಾ ಪಂಚಾಯತ್, ಕಾರಾಗೃಹ ಸಿಬ್ಬಂದಿ, ಸಾರ್ವಜನಿಕ (ಮುಕ್ತ).ತಾ.೬ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಇತರ ಕ್ರೀಡೆಗಳು
್ಥ ಭಾರದ ಗುಂಡು ಎಸೆತ - ಸಾರ್ವಜನಿಕರಿಗೆ (ಪುರುಷ/ ಮಹಿಳೆಯರಿಗೆ) ಹಾಗೂ ದಸರಾ ಸಮಿತಿ ಅವರಿಗೆ ಪ್ರತ್ಯೇಕವಾಗಿ ನಡೆಯಲಿದೆ.
್ಥ ಕಾಳು ಹೆಕ್ಕುವ ಸ್ಪರ್ಧೆ - ೧ ರಿಂದÀ ೩ ವರ್ಷದ ಬಾಲಕ/ಬಾಲಕಿಯರಿಗೆ
್ಥ ಕಪ್ಪೆ ಜಿಗಿತ - ೪ ರಿಂದ ೬ ವರ್ಷದ ಬಾಲಕ/ಬಾಲಕಿಯರಿಗೆ
್ಥ ಬಾಲ್ ಇನ್ದ ಬಾಸ್ಕೆಟ್ - ೪ ರಿಂದ ೬ ವರ್ಷದ ಬಾಲಕ/ಬಾಲಕಿಯರಿಗೆ
್ಥ ಹಗ್ಗ ಜಗ್ಗಾಟ - ಮುಕ್ತ ವಿಭಾಗದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ನಡೆಯಲಿದೆ
್ಥ ಥ್ರೋ ಬಾಲ್ - ಮುಕ್ತ ವಿಭಾಗದಲ್ಲಿ ಮಹಿಳೆಯರಿಗೆ ನಡೆಯಲಿದೆ.
್ಥ ವಾಲಿಬಾಲ್ (ತಾಲೂಕು ಮಟ್ಟ) - ಮುಕ್ತ ವಿಭಾಗದಲ್ಲಿ ಪುರುಷರಿಗೆ ನಡೆಯಲಿದೆ.
್ಥ ನಿಧಾನ ದ್ವಿಚಕ್ರ ವಾಹನ ಚಾಲನೆ (ಗೇರ್ ಮೋಟಾರ್ ವಾಹನ) - ಮುಕ್ತ ವಿಭಾಗದಲ್ಲಿ ಪುರುಷರಿಗೆ ನಡೆಯಲಿದೆ.
್ಥ ನಿಂಬೆ-ಚಮಚ ಓಟ - ೨೫ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ನಡೆಯಲಿದೆ.
್ಥ ವಿಷದ ಚೆಂಡು ಆಟ - ಮುಕ್ತ ವಿಭಾಗದಲ್ಲಿ ಮಹಿಳೆಯರಿಗೆ ನಡೆಯಲಿದೆ.