ಮಡಿಕೇರಿ, ಸೆ. ೨೯: ನಾಡ ಹಬ್ಬ ಮಡಿಕೇರಿ ದಸರಾ ಉತ್ಸವವನ್ನು ಹಲವು ವರ್ಷಗಳಿಂದ ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಅದರಂತೆ ಈ ವರ್ಷವು ಕೂಡ ಮಡಿಕೇರಿ ದಸರಾ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಅಕ್ಟೋಬರ್ ೩ ರಿಂದ ಅಕ್ಟೋಬರ್ ೧೨ ರವರೆಗೆ ನಡೆಯುವ ೨೦೨೪ ರ ದಸರಾ ಉತ್ಸವದ ಪ್ರಯುಕ್ತ ಮಡಿಕೇರಿ ನಗರದ ಜನರ ಹಾಗೂ ಪ್ರವಾಸಿಗರ ಆಕರ್ಷಣೆಗೆ ಒತ್ತು ನೀಡಲು ಮಡಿಕೇರಿ ನಗರದಲ್ಲಿನ ವಾಣಿಜ್ಯ ಮಳಿಗೆಗಳ ಕಟ್ಟಡಕ್ಕೆ, ಹೊಟೇಲ್‌ಗಳಿಗೆ ಹಾಗೂ ಇತರೆ ಕಟ್ಟಡಗಳಿಗೆ ಆಕರ್ಷಣೀಯವಾಗಿ ವಿದ್ಯುತ್ ದೀಪಾಲಂಕಾರವನ್ನು ಮಾಡಿ ಈ ವರ್ಷದ ದಸರಾ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ಸಹಕಾರ ನೀಡುವಂತೆ ಮಡಿಕೇರಿ ನಗರದ ವಾಣಿಜ್ಯ ಕಟ್ಟಡದ, ಹೊಟೇಲ್ ಕಟ್ಟಡ ಹಾಗೂ ಇತರೆ ಕಟ್ಟಡದ ಮಾಲಿಕರು ಮತ್ತು ವರ್ತಕರಿಗೆ ನಗರಸಭೆ ಪೌರಾಯುಕ್ತ ರಮೇಶ್ ಕೋರಿದ್ದಾರೆ.