ಮಡಕೇರಿ, ಸೆ. ೨೯: ಮೈಸೂರಿನ ಅರಮನೆ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ನಡೆದ ಜಾಥಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ಕೊಡವ ಕೂಟಾಳಿಯಡ ಕೂಟದ ಸದಸ್ಯರು ಭಾಗವಹಿಸಿದ್ದರು. ಅರಮನೆ ಮೈದಾನದಿಂದ ಬನ್ನಿ ಮಂಟಪದ ವರೆಗೆ ನಡೆದ ಈ ಮೆರವಣಿಗೆಯಲ್ಲಿ ಕೊಡಗಿನ ಕೊಡವ ಪಡೆಯಾಳಿಗಳು ಎನ್ನುವ ಪರಿಕಲ್ಪನೆಯಲ್ಲಿ ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ತಳಿಯತಕ್ಕಿ ದೀಪ ಹಿಡಿದು, ದುಡಿಕೊಟ್ಟ್ ಪಾಟ್ನ ಜೊತೆಗೆ ಕೊಡವ ಸಂಸ್ಕೃತಿಯ ಭಾಗÀವಾದ ಒಡಿಕತ್ತಿ, ಬಿಲ್ಲು, ಬಾಣ, ಬರ್ಜಿ, ಹಿಡಿದು ಜಾಥಾ ನಡೆಸಲಾಯಿತು.
ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ, ಕಾರ್ಯಕ್ರಮ ಸಂಚಾಲಕ ಕಾಳಮಂಡ ರಾಬಿನ್ ಅಚ್ಚಮ್ಮ, ಖಜಾಂಚಿ ಬೊಜ್ಜಂಗಡ ಭವ್ಯ ದೇವಯ್ಯ, ನಿರ್ದೇಶಕ ಅಮ್ಮಾಟಂಡ ಚೇತನ್ ಅಪ್ಪಯ್ಯ, ಸದಸ್ಯರಾದ ಇಟ್ಟಿರ ಭವ್ಯ ಈಶ್ವರ್, ಮಾಚಂಗಡ ಸಚಿನ್ ತಿಮ್ಮಯ್ಯ, ಚೇಂದಿರ ಅಬಿನ್ ನಾಣಯ್ಯ, ಬುಟ್ಟಿಯಂಡ ಕಾರ್ಸನ್ ಕಾರ್ಯಪ್ಪ, ಕಾಯಪಂಡ ಇಶಾನ್ ಪೂಣಚ್ಚ, ಪೊನ್ನೋಲತಂಡ ಶರಣು ತಮ್ಮಯ್ಯ, ಕೇಳಪಂಡ ಲಿಂಕಿತ್ ತಿಮ್ಮಯ್ಯ, ಚಪ್ಪಂಡ ಪೂರ್ವಿಕ್ ಪೊನ್ನಣ್ಣ, ಚೋಳಂಡ ತರುಣ್ ಗಣಪತಿ, ಕಾಯಪಂಡ ತ್ರಿಶ ಮುತ್ತಮ್ಮ, ಮಾತಂಡ ಕುಶಿ ಉನ್ನತಿ, ಮಾಳೇಟಿರ ಯಶ್ಮ ಬೋಜಮ್ಮ, ಕೊಕ್ಕಂಡ ನಿಶಿ ಚೋಂದಮ್ಮ, ಮೂಕೊಂಡ ಸಂಜನಾ ದಮಯಂತಿ, ಅರಮಣಮಾಡ ದೇಶಿಕ ದೇಚಮ್ಮ, ಇಟ್ಟಿರ ಹಿತಾರ್ಥ್ ಕಾರ್ಯಪ್ಪ, ಮರುವಂಡ ರಿಷಿ ಕಾರ್ಯಪ್ಪ ಭಾಗವಹಿಸಿದ್ದರು.