ಮಡಿಕೇರಿ, ಸೆ. ೩೦: ಜಿಲ್ಲೆಯಲ್ಲಿ ಪ್ರಸ್ತುತ ಮಳೆಯ ವಾತಾವರಣ ಒಂದಷ್ಟು ಕಡಿಮೆಯಾಗಿ ಬಿಸಿಲಿನ ಸನ್ನಿವೇಶ ಎದುರಾಗುತ್ತಿದೆ. ಆದರೂ ವಾತಾವರಣದಲ್ಲಿ ಏಕಾಏಕಿ ಬದಲಾವಣೆ ಕಂಡುಬರುತ್ತಿದೆ. ಬಿಸಿಲಿನ ವಾತಾವರಣ ಇದ್ದರೂ ದಿಢೀರ್ ಮೋಡ ಆವರಿಸಿ ಮಳೆ ಸುರಿಯುತ್ತಿರುವ ಪ್ರಸಂಗಗಳೂ ಹಲವೆಡೆ ಕೆಲವು ದಿನಗಳಿಂದ ಎದುರಾಗುತ್ತಿದೆ. ಈ ನಡುವೆ ಭಾನುವಾರ ರಾತ್ರಿ ವಾತಾವರಣದಲ್ಲಿ ಇದ್ದಕ್ಕಿದ್ದಂತೆ ಭಾರೀ ಬದಲಾವಣೆಯಾಗಿ ಜಿಲ್ಲೆಯ ಹಲವೆಡೆಗಳಲ್ಲಿ ಗುಡುಗು-ಮಿಂಚಿನ ಸಹಿತ

ಗುಡುಗು - ಮಿಂಚಿನ ಅಬ್ಬರಕ್ಕೆ ಬೆಚ್ಚಿದ ಜನತೆ

(ಮೊದಲ ಪುಟದಿಂದ) ಧಾರಾಕಾರ ಮಳೆ ಸುರಿಯುವುದರೊಂದಿಗೆ ಆತಂಕ ಸೃಷ್ಟಿಯಾಗಿದ್ದ ಕುರಿತು ವರದಿಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಗುಡುಗು ಸಹಿತ ಒಂದಷ್ಟು ಮಳೆ ಸುರಿದಿದೆ. ಬೆಳಗ್ಗಿನ ಜಾವದ ತನಕವೂ ನಗರದಲ್ಲಿ ಮಳೆ ಸುರಿದಿದ್ದು ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣ ಸೃಷ್ಟಿಯಾಗಿತ್ತು. ದಕ್ಷಿಣ ಕೊಡಗಿನ ಶ್ರೀಮಂಗಲ, ಕುಟ್ಟ, ಬಿರುನಾಣಿ, ಟಿ.ಶೆಟ್ಟಿಗೇರಿ ವ್ಯಾಪ್ತಿಯ ಗ್ರಾಮಗಳಲ್ಲೂ ಹೆಚ್ಚಿನ ಮಳೆಯಾಗಿದೆ. ಮಳೆಗಿಂತ ಮಿಗಿಲಾಗಿ ದಿಢೀರನೆ ಎದುರಾದ ರಭಸದ ಗಾಳಿ ಭಾರೀ ಸಿಡಿಲು ಹಾಗೂ ಮಿಂಚಿನ ಸನ್ನಿವೇಶಕ್ಕೆ ಜನರು ಆತಂಕ ಎದುರಿಸುವಂತಾಗಿತ್ತು ಎಂದು ಆ ವ್ಯಾಪ್ತಿಯ ಜನರು ತಿಳಿಸಿದ್ದಾರೆ. ಸಾಧಾರಣವಾಗಿ ಈ ಸಮಯದಲ್ಲಿ ಗುಡುಗು-ಮಿಂಚು ಇರುವುದಿಲ್ಲ. ಆದರೆ ಕಳೆದ ರಾತ್ರಿ ೮ ಗಂಟೆಯ ಸುಮಾರಿಗೆ ವಾತಾವರಣದಲ್ಲಿ ಇದ್ದಕ್ಕಿಂದತೆ ಭಾರೀ ಬದಲಾವಣೆ ಕಂಡುಬAದಿತ್ತು. ಭಾರೀ ಗಾಳಿಯೊಂದಿಗೆ ಗುಡುಗು ಅಬ್ಬರಿಸಿತ್ತು. ಜತೆಯಲ್ಲೇ ಮಿಂಚು ಸಹಿತವಾಗಿ ಮಳೆ ಸುರಿದಿದೆ. ಶ್ರೀಮಂಗಲ, ಕುಟ್ಟ, ಟಿ.ಶೆಟ್ಟಿಗೇರಿ, ತಾವಳಗೇರಿ ವಿಭಾಗದಲ್ಲಿ ಅರ್ಧ ಇಂಚಿನಿAದ ಒಂದು ಇಂಚಿನಷ್ಟು ಮಳೆ ಸುರಿದಿದೆ. ಅತ್ತ ಪೊರಾಡು - ಬಾಡಗರಕೇರಿ, ಬಿರುನಾಣಿ ವ್ಯಾಪ್ತಿಯಲ್ಲೂ ಅರ್ಧ ಇಂಚಿನಿAದ ೧.೩೦ ಇಂಚಿನಷ್ಟು ರಭಸದ ಮಳೆ ಸುರಿದಿರುವ ಕುರಿತು ವರದಿಯಾಗಿದೆ.

ಈ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವೂ ಎದುರಾಗಿತ್ತು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಇನ್ನಿತರ ಕೆಲವು ಪ್ರದೇಶಗಳಲ್ಲೂ ರಾತ್ರಿ ವೇಳೆ ಮಳೆ ಸುರಿದಿದೆ. ಭಾರೀ ಸಿಡಿಲಿಗೆ ದಕ್ಷಿಣ ಕೊಡಗಿನ ಕೆಲವೆಡೆಯಲ್ಲಿ ವಿದ್ಯುತ್ ಬಲ್ಬ್ ಸ್ಫೋಟವಾಗಿರುವುದು, ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿರುವ ಕುರಿತೂ ತಿಳಿದುಬಂದಿದೆ.