ಮಡಿಕೇರಿ, ಸೆ. ೨೯: ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌ನ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆ ಬ್ಯಾಂಕಿನ ಅಧ್ಯಕ್ಷೆ ಪ್ರೇಮ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರದ ಕೊಡವ ಸಮಾಜ ದಲ್ಲಿ ನಡೆದ ಮಹಾಸಭೆ ಯನ್ನುದ್ದೇಶಿಸಿ ಮಾತನಾಡಿದ ಪ್ರೇಮ ಸೋಮಯ್ಯನವರು, ೨೦೨೩-೨೪ರಲ್ಲಿ ಬ್ಯಾಂಕ್ ರೂ. ೧೨,೧೯,೩೭೯ ಲಾಭದೊಂದಿಗೆ ರೂ. ೮,೧೯,೩೭೯ ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಆಡಿಟ್ ವರ್ಗೀಕರಣ ‘ಎ' ಆಗಿದ್ದು ಆರ್.ಬಿ.ಐ. ಪರಿವೀಕ್ಷಣೆ ನಡೆದಿರುತ್ತದೆ. ಕೆ.ಡಿ.ಸಿ.ಸಿ. ಬ್ಯಾಂಕಿನಿAದ ನೀಡಲಾಗುವ ಪಟ್ಟಣ ಸಹಕಾರ ಬ್ಯಾಂಕುಗಳ ಪೈಕಿ ಉತ್ತಮ ಕಾರ್ಯನಿರ್ವಹಿಸುವ ಬ್ಯಾಂಕುಗಳ ಪ್ರಶಸ್ತಿ ನಮ್ಮ ಬ್ಯಾಂಕಿಗೆ ನಿರಂತರ ೨ ವರ್ಷಗಳಿಂದ ಪ್ರಥಮ ಸ್ಥಾನ ದೊರಕಿದೆ ಎಂದು ಹೇಳಿದರು. ಬ್ಯಾಂಕಿನಲ್ಲಿ ಒಟ್ಟು ೨೩೪೯ ಸದಸ್ಯರಿದ್ದು ಪಾಲು ಬಂಡವಾಳ ರೂ. ೪೨.೦೫ ಲಕ್ಷಗಳಾಗಿದ್ದು ಒಟ್ಟು ರೂ. ೮.೨೭.೬೭ ಲಕ್ಷ ನಿಧಿಗಳಿ ರುತ್ತದೆ. ಬ್ಯಾಂಕಿನ ಠೇವಣಾತಿಗಳು ರೂ. ೧೦.೨೦ ಕೋಟಿಗಳಾಗಿದ್ದು. ಸಾಲ ಹೊರಬಾಕಿ ರೂ. ೬.೮೧ ಕೋಟಿಗಳಾಗಿದ್ದು ವಸೂಲಾತಿಯು ಶೇ. ೯೮ರಷ್ಟು ಆಗಿರುತ್ತದೆ. ಬ್ಯಾಂಕಿನ ಅಭಿವೃದ್ಧಿಗೆ ದ್ವಿಚಕ್ರ ವಾಹನ ಸಾಲ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಬ್ಯಾಂಕಿನ ಉಪಾಧ್ಯಕ್ಷೆ ಅಂಬಿಕಾ ರಾವ್, ನಿರ್ದೇಶಕರಾದ ಲೀಲಾ ಮೇದಪ್ಪ, ಆಶಾ ಚಿಣ್ಣಪ್ಪ, ಮೋಂತಿ ಗಣೇಶ್, ಎಂ.ಎA. ಧರ್ಮಾವತಿ, ಪ್ರೇಮಕುಮಾರಿ ವಿ.ಕೆ., ಅರವಿಂದ ಪಿ.ಎಸ್., ಕಸ್ತೂರಿ ಎನ್.ಎ., ಬೇಬಿ ಪೂವಯ್ಯ, ಟಿ.ಪಿ. ಜಯ, ಸುನೀತ ಪಿ.ಎಸ್., ಜಯಲೀಲ ಸತೀಶ್, ಯಶೋಧ ಹೆಚ್.ಬಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಪಿ. ಶೈಲಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.