ವೀರಾಜಪೇಟೆ, ಸೆ. ೨೯: ವೀರಾಜಪೇಟೆ ಪುರಸಭಾ ವ್ಯಾಪ್ತಿಯಲ್ಲಿ ವ್ಯಾಪಾರ-ಉದ್ದಿಮೆ ನಡೆಸುತ್ತಿರುವವರು ಅವರವರ ಅಂಗಡಿ ಮಳಿಗೆಗಳ ನಾಮ ಫಲಕಗಳÀಲ್ಲಿ ಶೇ. ೬೦ರಷ್ಟು ಅನುಪಾತದಲ್ಲಿ ಕನ್ನಡ ಭಾಷೆಯನ್ನು ಅಳವಡಿಸುವಂತೆ ಸರಕಾರ ಹೊರಡಿಸಿರುವ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಶಾಖೆ ಸೂಚಿಸಿದೆ. ನಾಮಫಲಕಗಳಲ್ಲಿ ಕನ್ನಡ ಅಳವಡಿಸಲು ದಿನಾಂಕ ೧೫-೧೦-೨೦೨೪ ಕೊನೆಯ ಗಡುವೆಂದು ಸರಕಾರ ನಿಗದಿ ಪಡಿಸಿದ್ದು, ತಪ್ಪಿದಲ್ಲಿ ಅಂಗಡಿಗಳ ಪರವಾನಗಿಯನ್ನು ರದ್ದು ಪಡಿಸುವಂತಹ ಕಟ್ಟುನಿಟ್ಟಿನ ಕ್ರಮಕ್ಕೆ ಸಂಬAಧಪಟ್ಟ ಇಲಾಖೆಯವರು ಮುಂದಾಗಬಹುದು. ಅಲ್ಲದೆ ಸರಕಾರ ಆದೇಶಸಿರುವ ಜುಲ್ಮಾನೆಯನ್ನು ಭರಿಸಬೇಕಾಗಬಹುದೆಂದು ಈ ಬಗ್ಗೆ ಅಂಗಡಿ ಮಾಲೀಕರುಗಳು ಗಮನಿಸುವಂತೆಯೂ ಸೂಚಿಸಲಾಗಿದೆ. ಈ ಕ್ರಮವನ್ನು ತಪ್ಪಿಸಲು ಅಂಗಡಿ ಮಾಲೀಕರುಗಳು ಸಹಕರಿಸಬೇಕಾಗಿ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಶಾಖೆಯ ಅಧ್ಯಕ್ಷ ಮಾದಪಂಡ ಕಾಶಿ ಕಾವೇರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಅಮ್ಮುಣಿಚಂಡ ರವಿ ಉತ್ತಪ್ಪ ತಿಳಿಸಿದ್ದಾರೆ.