ನಾಪೋಕ್ಲು, ಸೆ. ೩೦: ಸಂಘದಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿ ಸಂಘವು ಇನ್ನು ಹೆಚ್ಚಿನ ಲಾಭ ಗಳಿಸಿ ಅಭಿವೃದ್ಧಿ ಹೊಂದಲು ಸದಸ್ಯರು ಸಹಕರಿಸಬೇಕು ಎಂದು ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲಿಯಾಟಂಡ ಎ. ರಘು ತಮ್ಮಯ್ಯ ಹೇಳಿದರು.
ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸದರಿ ಸಾಲಿನಲ್ಲಿ ಸಂಘವು ರೂ ೨೫,೦೪,೪೪೬/- (ಇಪ್ಪತ್ತೈದು ಲಕ್ಷದ ನಾಲ್ಕು ಸಾವಿರ ನಾನೂರ ನಲವತ್ತಾರು) ಲಾಭ ಗಳಿಸಿದೆ ಎಂದರು. ಸದಸ್ಯರಿಗೆ ಶೇ. ೧೨ ರಂತೆ ಡಿವಿಡೆಂಟ್ ವಿತರಿಸುವಂತೆ ತೀರ್ಮಾನಿಸಲಾಗಿದೆ. ಸಂಘವು ಸದಸ್ಯರ ಅನುಕೂಲಕ್ಕಾಗಿ ಸಹಕಾರ ಸಂಘಗಳ ಸಹಾಯಕ ನಿಬಂದಕರಿಗೆ ಗ್ಯಾಸ್ ಏಜನ್ಸಿಗೆ ಅರ್ಜಿ ಸಲ್ಲಿಸಿದ್ದು ಅನುಮತಿ ದೊರೆತ ನಂತರ ಗ್ಯಾಸ್ ಏಜನ್ಸಿ ತೆರೆಯುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸದಸ್ಯರ ಅನುಕೂಲಕ್ಕಾಗಿ ಕೆ.ಡಿ.ಸಿ.ಸಿ ಬ್ಯಾಂಕಿನ ಶಾಖೆಯನ್ನು ಕಕ್ಕಬೆಯಲ್ಲಿ ತೆರೆಯಲು ಬ್ಯಾಂಕಿನ ಅಧ್ಯಕ್ಷರನ್ನು ಕೇಳಿಕೊಂಡ ಮೇರೆಗೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು ಆರ್.ಬಿ.ಐ ನಿಂದ ಅನುಮತಿ ಹಾಗೂ ರಾಜ್ಯ ಸರ್ಕಾರದ ಅನುಮತಿ ದೊರೆತ ನಂತರ ೨ ವರ್ಷದ ಒಳಗಾಗಿ ತೆರೆಯಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸದಸ್ಯರಿಗೆ ಮಾಹಿತಿ ನೀಡಿದರು. ಪ್ರಸಕ್ತ ಸಾಲಿನಲ್ಲಿ ಸಂಘವು ಎ ಶ್ರೇಣಿಯಲ್ಲಿ ಮುಂದುವರೆದಿರುತ್ತದೆ. ಸಂಘದಲ್ಲಿ ಒಟ್ಟು ೧೭.೩೨ ಕೋಟಿ ರೂಗಳಷ್ಟು ದುಡಿಯುವ ಬಂಡವಾಳವಿದ್ದು ಸದಸ್ಯರಿಗೆ ಕೆ.ಸಿ.ಸಿ. ಸಾಲ, ಗೊಬ್ಬರ ಸಾಲ, ಜಾಮೀನು ಸಾಲ ವಿತರಿಸಿದ್ದು ಎಲ್ಲಾ ಸಾಲಗಳನ್ನು ಶೇ. ೯೯ ರಷ್ಟು ವಸೂಲಾತಿಯಾಗಿರುತ್ತದೆ ಎಂದರು.
ಮಹಾಸಭೆಯಲ್ಲಿ ಉಪಾಧ್ಯಕ್ಷೆ ಪ್ರಮೀಳ ಪೆಮ್ಮಯ್ಯ , ನಿರ್ದೆಶಕರಾದ ಬಡಕಡ ಎಂ. ಬೆಳ್ಳಿಯಪ್ಪ, ಕಲಿಯಾಟಂಡ ಎಂ ಬೋಪಣ್ಣ, ನಿಡುಮಂಡ ಸಿ, ಪೂವಯ್ಯ, ಕೋಡಿಮಣಿಯಂಡ ಎಂ ನಾಣಯ್ಯ ನಂಬಡಮAಡ ಬಿ. ಸುನಿತಾ, ಎ.ಎನ್. ಲಕ್ಷö್ಮಣ, ಪರದಂಡ ಟಿ. ಕರುಂಬಯ್ಯ, ಪಾಲೆ ಟಿ. ಕಾರ್ಯಪ್ಪ, ಕುಡಿಯರ ಬಿ. ಅಚ್ಚಯ್ಯ ಹಾಗೂ ಜಿಲ್ಲಾ ಕೇಂದ್ರ ಬ್ಯಾಂಕಿನ ಮೇಲ್ವಿಚಾರಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸದಸ್ಯರು ಹಾಜರಿದ್ದರು.