ಸೋಮವಾರಪೇಟೆ, ಸೆ. ೩೦: ಅಕ್ರಮವಾಗಿ ಗೋಮಾಂಸವನ್ನು ಲೈನ್ ಮನೆಯಲ್ಲಿ ಶೇಖರಿಸಿಟ್ಟು ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆ ಪೊಲೀಸರು ಕಾರ್ಯಾಚರಣೆ ನಡೆಸಿ, ಗೋ ಮಾಂಸವನ್ನು ವಶಕ್ಕೆ ಪಡೆದಿರುವ ಘಟನೆ ಮಾದಾಪುರ ಸಮೀಪದ ಬಿಳಿಗೇರಿಯಲ್ಲಿ ನಡೆದಿದೆ.
ಬಿಳಿಗೇರಿಯ ಶಮಂತ್ ಎಂಬವರ ಲೈನ್ ಮನೆಯಲ್ಲಿ ವಾಸವಿರುವ ಅಸ್ಸಾಂ ಮೂಲದ ವ್ಯಕ್ತಿಗಳು ಅಕ್ರಮವಾಗಿ ಗೋ ಮಾಂಸವನ್ನು ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ಸ್ಥಳೀಯ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ಮಾಹಿತಿ ಬಂದಿದ್ದು, ಈ ಸಂದರ್ಭ ಲೈನ್ ಮನೆಗೆ ಪೊಲೀಸರೊಂದಿಗೆ ತೆರಳಿ ಪರಿಶೀಲಿಸಿದ ಸಂದರ್ಭ ೧೫ ಕೆ.ಜಿ. ಯಷ್ಟು ಗೋಮಾಂಸ ಲೈನ್ಮನೆಯಲ್ಲಿ ಪತ್ತೆಯಾಗಿದೆ.
ಪೊಲೀಸರು ತೆರಳುವಷ್ಟರಲ್ಲಿ ಅಸ್ಸಾಂ ಮೂಲದ ನಾಲ್ವರು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ.ಗೋಮಾಂಸವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾವಿರಾರು ಮಂದಿ ಅಸ್ಸಾಮಿಗರ ಹೆಸರಿನಲ್ಲಿ ನೆಲೆಸಿದ್ದು, ಬಹುತೇಕರು ಬಾಂಗ್ಲಾದಿAದ ಬಂದಿರುವ ನುಸುಳುಕೋರರಾಗಿರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ. ಅಸ್ಸಾಮಿಗರೆಂದು ಹೇಳಿಕೊಳ್ಳುವ ಜನರಿಂದ ಜಿಲ್ಲೆಯಲ್ಲಿ ಪದೇ ಪದೇ ಗೋಮಾಂಸ ಸಾಗಾಟ, ಹಲ್ಲೆ, ಕಳ್ಳತನ, ಕೊಲೆಯಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಮುಂದೆ ಗಂಡಾAತರ ಸಂಭವಿಸುವ ಮೊದಲು ಬೆಳೆಗಾರರು, ತೋಟ ಮಾಲೀಕರು ಎಚ್ಚರಿಕೆ ವಹಿಸಬೇಕೆಂದು ಹಿಂದೂಪರ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.
ಅಕ್ರಮ ಗೋಮಾಂಸ ಮಾರಾಟ ಮಾಡುತ್ತಿದ್ದ ಹಾಗೂ ಕಾರ್ಯಾಚರಣೆ ಸಂದರ್ಭ ಓಡಿ ಹೋಗಿರುವ ಆರೋಪಿಗಳನ್ನು ಪತ್ತೆ ಹಚ್ಚಿ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ.ತಪ್ಪಿದ್ದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.