ಚೇರಂಬಾಣೆ, ಸೆ. ೨೮: ಬೇಂಗ್‌ನಾಡ್ ವ್ಯಾಪ್ತಿಯ ಚೇರಂಬಾಣೆಯಲ್ಲಿ ಶನಿವಾರದಂದು ಕೊಡವ ಸಾಂಸ್ಕೃತಿಕ ಕಲರವ ಕಂಡುಬAದಿತು. ಸಾಂಪ್ರದಾಯಿಕ ಧಿರಿಸಿನಲ್ಲಿ ತಳಿಯತಕ್ಕಿ ಬೊಳಕ್ ಹಿಡಿದು ಸಾಗಿದ ಮಹಿಳೆಯರು ಕುಪ್ಯಚೇಲೆಯೊಂದಿಗೆ ಕೋವಿ ಕತ್ತಿ ಹಿಡಿದು ಸಾಗಿದ ಪುರುಷರು, ಕೊಂಬ್‌ಕೊಟ್ಟ್ ವಾಲಗ, ದುಡಿಕೊಟ್ಟ್ಪಾಟ್, ಇವೆಲ್ಲದರೊಂದಿಗೆ ಅಜ್ಜಪ್ಪ-ತಾಯವ್ವಂಡ ತೆರೆ ಸಹಿತವಾಗಿ ನೂರಾರು ಮಂದಿ ಪುರುಷರು, ಮಹಿಳೆಯರು, ಶಾಲಾ ವಿದ್ಯಾರ್ಥಿಗಳು ಚೇರಂಬಾಣೆ ಪಟ್ಟಣದಲ್ಲಿ ಕೊಡವ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಮುಖ್ಯ ರಸ್ತೆಯಲ್ಲಿ ಸಾಗಿದ ದೃಶ್ಯ ಗಮನ ಸೆಳೆಯಿತು.

ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ೧೫೭ನೇಯ ಜನ್ಮದಿನದ ಸ್ಮರಣೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬೇಂಗ್‌ನಾಡ್ ಕೊಡವ ಸಮಾಜ ಚೇರಂಬಾಣೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ ‘ಕೊಡವ ಸಾಹಿತ್ಯ ನಾಳ್’ ವಿವಿಧ ಕಾರ್ಯಕ್ರಮಗಳೊಂದಿಗೆ ವೈವಿಧ್ಯಮಯವಾಗಿ ಜರುಗಿತು.

ಕಾರ್ಯಕ್ರಮದ ಅಂಗವಾಗಿ ವಿಶೇಷವಾಗಿ ಸಾಂಸ್ಕೃತಿಕ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ಮೆರವಣಿಗೆ ಚೇರಂಬಾಣೆ ಪಟ್ಟಣದಲ್ಲಿ ಗಮನ ಸೆಳೆಯಿತು. ಮುಖ್ಯ ರಸ್ತೆಯಲ್ಲಿ ಸಾಗಿದ ಅದ್ದೂರಿಯ ಮೆರವಣಿಗೆ ಕಾರ್ಯಕ್ರಮ ನಿಗದಿಯಾಗಿದ್ದ ಚೇರಂಬಾಣೆ ಕೊಡವ ಸಮಾಜದಲ್ಲಿ ಸಮಾಪನಗೊಂಡು ಅಲ್ಲಿ ವೇದಿಕೆ ಕಾರ್ಯಕ್ರಮ ಸೇರಿದಂತೆ ಅಪ್ಪಚ್ಚಕವಿಯ ಸೇವೆ - ಸಾಧನೆಯ ಸ್ಮರಣೆ, ಇನ್ನಿತರ ವಿಶೇಷತೆಗಳೊಂದಿಗೆ ಅಪರೂಪಕ್ಕೆಂಬAತೆ ಬೇಂಗ್‌ನಾಡ್ ವ್ಯಾಪ್ತಿಯಲ್ಲಿ ಕೊಡವ ಸಾಂಸ್ಕೃತಿಕ ಕಲರವವನ್ನು ಸೃಷ್ಟಿಸಿತ್ತು.

ಕೊಡವ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹಾಗೂ ಸದಸ್ಯರು, ಬೇಂಗ್‌ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ ಹಾಗೂ ಪದಾಧಿಕಾರಿಗಳು, ಸದಸ್ಯರು, ವ್ಯಾಪ್ತಿಯ ಜನರು, ಸ್ಥಳೀಯ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಕೊಡವ ಅಕಾಡೆಮಿಯ ಮಾಜಿ ಸದಸ್ಯರಾದ ಕೆದಮುಳ್ಳೂರಿನ ಬೀಕಚಂಡ ಪುಟ್ಟ ಬೆಳ್ಯಪ್ಪ ತಂಡದಿAದ ಅಜ್ಜಪ್ಪ- ತಾಯವ್ವ ತೆರೆ ಗಮನ ಸೆಳೆಯಿತು.

(ಮೊದಲ ಪುಟದಿಂದ) ಇದರೊಂದಿಗೆ ಕೋಪಟ್ಟಿಯ ವನಿತ ಪೊಮ್ಮಕ್ಕಡ ತಂಡ, ಕೈಕೇರಿಯ ಸವಿತಾ ಸಮಾಜದಿಂದ ಉಮ್ಮತ್ತಾಟ್, ಮುಕ್ಕೋಡ್ಲು ವ್ಯಾಲಿಡ್ಯೂ ತಂಡದಿAದ ಕತ್ತಿಯಾಟ್, ಬೊಳಕಾಟ್, ಅಪ್ಪಚ್ಚಕವಿ ಜನ್ಮದಿನದ ಸ್ಮರಣೆ ಹಾಗೂ ಕೈಲ್‌ಪೊಳ್ದ್ನ ಅಂಗವಾಗಿ ವಿವಿಧ ಕಾರ್ಯಕ್ರಮಗಳು, ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ‘ಕೊಡವ ಕವನಮೊತ್ತೆ ಪುಸ್ತಕ ಬಿಡುಗಡೆ, ಅತಿಥಿಗಳಿಂದ ಭಾಷಣ, ಮತ್ತಿತರ ಕಾರ್ಯಕ್ರಮಗಳೊಂದಿಗೆ ಕೊಡವ ಸಾಹಿತ್ಯನಾಳ್ ಯಶಸ್ವಿಯಾಗಿ ಜರುಗಿತು.

ಬೆಳಗ್ಗಿನ ಕಾರ್ಯಕ್ರಮದ ವೇದಿಕೆಯಲ್ಲಿ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಎಂ.ಎಲ್.ಸಿ. ಮಂಡೇಪAಡ ಸುಜಾ ಕುಶಾಲಪ್ಪ, ಬೇಂಗ್‌ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ, ಅತಿಥಿಗಳಾಗಿದ್ದ ಪಟ್ಟಮಾಡ ಮಿಲನ್ ಮುತ್ತಣ್ಣ, ರಿಜಿಸ್ಟಾçರ್ ಅಜ್ಜಿಕುಟ್ಟಿರ ಗಿರೀಶ್, ನಾಪಂಡ ಗಣೇಶ್, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಪೊನ್ನಚೆಟ್ಟಿರ ರಮೇಶ್ ಗಣಪತಿ, ತೇಲಪಂಡ ಪವನ್, ಮತ್ತಿತರರು ಹಾಜರಿದ್ದರು.

ಮಹೇಶ್ ನಾಚಯ್ಯ ಅವರು ತಪ್ಪಡ್‌ಕ ಕಟ್ಟಿ ಮಾತನಾಡಿ, ಕೊಡಗಿನಲ್ಲಿ ಸಾಹಿತ್ಯ ಕೃಷಿ ಬೆಳಗುವಂತಾಗಲಿ ಎಂದು ಆಶಿಸಿದರು. ಕುಟ್ಟೇಟಿರ ಕುಮಾರಿ ಹಾಗೂ ಲಕ್ಷಿö್ಮ ಪ್ರಾರ್ಥಿಸಿ, ಬಡ್ಡೀರ ನಳಿನಿ ಪೂವಯ್ಯ, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ ನಿರೂಪಿಸಿದರು.ಕೊಡವ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಬೆಳವಣಿಗೆಯಲ್ಲಿ ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ ಶ್ರಮ ಮಹತ್ತರವಾಗಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಚೇರಂಬಾ ಣೆಯ ಬೇಂಗ್‌ನಾಡು ಕೊಡವ ಸಮಾಜ ಸಹಕಾರದಲ್ಲಿ ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ ೧೫೭ ನೇ ಜನ್ಮದಿನದ ಪ್ರಯುಕ್ತ ಚೇರಂಬಾಣೆಯಲ್ಲಿ ನಡೆದ ‘ಕೊಡವ ಸಾಹಿತ್ಯ ನಾಳ್' ಕಾರ್ಯ ಕ್ರಮದಲ್ಲಿ ಅಪ್ಪಚ್ಚ ಕವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಅಪ್ಪಚ್ಚ ಕವಿ ಅವರ ಆಶೋತ್ತರ ಗಳನ್ನು ಉಳಿಸಿ ಬೆಳೆಸುವಲ್ಲಿ ಕೊಡವ ಭಾಷಿಕರೆಲ್ಲರೂ ಒಂದುಗೂಡಬೇಕಿದೆ. ಇದರಿಂದ ಕೊಡವ ಸಂಸ್ಕೃತಿ, ಆಚಾರ, ವಿಚಾರಗಳು, ಸಾಹಿತ್ಯ ಉಳಿಸಿ ಬೆಳೆಸಲು ಸಾಧ್ಯ, ಆ ನಿಟ್ಟಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಕೊಡವ ಸಂಸ್ಕೃತಿ, ಸಾಹಿತ್ಯ, ಕಲೆಗಳು ಜನಪ್ರಿಯತೆ ಗಳಿಸಿಕೊಂಡಿವೆ.

ಕೊಡಗಿನ ಪರಿಸರಕ್ಕೆ ಪೂರಕವಾಗಿರುವಂತೆ ಕೊಡವ ಸಂಸ್ಕೃತಿ ಮತ್ತು ಕಲೆಯನ್ನು ಎಲ್ಲೆಡೆಯೂ ಪಸರಿಸುವಂತಾಗಬೇಕು ಎಂದು ಪ್ರತಿಪಾದಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗೆ ಜಿಲ್ಲೆಯ ಎಲ್ಲೆಡೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ.ಅಪ್ಪಣ್ಣ ಹಾಗೂ ಅಕಾಡೆಮಿ ಮಾಜಿ ಸದಸ್ಯ ಚೀರಮ್ಮನ ವಾಣಿ ಚಂಗುಮಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬೆಂಗೂರು ಗ್ರಾಮ ಪಂಚಾಯಿತಿ

ಅಧ್ಯಕ್ಷೆ ಪಟ್ಟಮಡ ಮಿಲನ್ ಮುತ್ತಣ್ಣ, ಚೇರಂಬಾಣೆ ಬೆಂಗ್ ನಾಡು ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ನಾಪಂಡ ಗಣೇಶ್, ಪಾನಿಕುಟ್ಟಿರ ಕೆ.ಕುಟ್ಟಪ್ಪ, ಪುತ್ತರೀರ ಪಪ್ಪು ತಿಮ್ಮಯ್ಯ, ಕಂಬೆಯAಡ ಡೀನಾ ಬೋಜಣ್ಣ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಪೊನ್ನಿರ ಯು ಗಗನ್, ಕುಡಿಯರ ಎಂ.ಕಾವೇರಪ್ಪ, ನಾಯಂದಿರ ಆರ್.ಶಿವಾಜಿ, ಚೆಪ್ಪುಡಿರ ಎಸ್.ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ರಿಜಿಸ್ಟಾçರ್ ಅಜ್ಜಿಕುಟ್ಟಿರ ಸಿ.ಗಿರೀಶ್, ಇತರರು ಇದ್ದರು.

ವ್ಯಾಲಿಡ್ಯೂ ತಂಡದವರಿAದ ಬೊಳಕಾಟ್, ಕತ್ತಿಯಾಟ್, ಚೌರಿಯಾಟ್ ಹಾಗೂ ರಾಜರಾಜೇಶ್ವರಿ ಶಾಲಾ ಮಕ್ಕಳಿಂದ ಕೋಲಾಟ್ ಪ್ರದರ್ಶನ ನಡೆಯಿತು. ತೇಲಪಂಡ ಲಕ್ಷಿö್ಮ ಮತ್ತು ಕುಟ್ಟೇಟಿರ ಕುಮಾರಿ ಅವರು ಪ್ರಾರ್ಥಿಸಿದರು, ನಳಿನಿ ಮತ್ತು ಪ್ರಮೀಳಾ ಅವರು ನಿರೂಪಿಸಿದರು.