ಮಡಿಕೇರಿ, ಸೆ. ೨೮: ಕೊಡಗು ಜಿಲ್ಲೆಯ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.
ಬೇಡಿಕೆಗಳಾದ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವೇತನ ಮತ್ತು ನಿವೃತ್ತಿ ವೇತನ ವಿಧೇಯಕ ೨೦೧೪ ರದ್ದುಪಡಿಸುವುದು, ಈ ಸರ್ಕಾರವು ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಹಳೆಯ ಪಿಂಚಣಿಯನ್ನು ಜಾರಿಗೆ ತರುವುದು, ೧-೪-೨೦೦೪ ಪೂರ್ವದಲ್ಲಿ ನೇಮಕಾತಿಯಾದವರಿಗೆ ಹಳೆಯ ನಿಶ್ಚಿತ ಪಿಂಚಣಿ ನೀಡುವುದು, ಅನುದಾನಿತ ನೌಕರರಿಗೂ ಕೂಡ ಸರಕಾರಿ ನೌಕರಿಗೆ ನೀಡುವಂತ ವೈದ್ಯಕೀಯ ಸೌಲಭ್ಯಗಳ ಜಾರಿಗೊಳಿಸುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಪರವಾಗಿ ಜಿಲ್ಲಾಧಿಕಾರಿಗಳ ಆಪ್ತ ಕಾರ್ಯದರ್ಶಿಗಳು ಮನವಿ ಪತ್ರವನ್ನು ಸ್ವೀಕರಿಸಿದರು. ಪಿಂಚಣೆ ವಂಚಿತ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪಡಿಞರಂಡ ಪ್ರಭು ಕುಮಾರ್, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ಪೂಜಾರ್, ಉಪನ್ಯಾಸಕ ಸಿದ್ದಾರಾಜು, ಸಹ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಕುಮಾರ್, ಪಿಂಚಣಿ ವಂಚಿತ ನೌಕರರ ಸಂಘದ ಸಂಚಾಲಕರುಗಳಾದ ಜಯಕುಮಾರ್, ಶಿವಪ್ರಸಾದ್, ತಿಪ್ಪೇಸ್ವಾಮಿ, ಅಶೋಕ್, ಸಿದ್ದಾರೂಢ ತಳವಾರ್, ರಂಗನಾಥ್, ಲೋಕೇಶ್, ತಿಮ್ಮರಾಜು, ರಾಘವೇಂದ್ರ, ಗುಂಡಪ್ಪ, ಅಕ್ಕಮ್ಮ ಮುಂತಾದವರು ಹಾಜರಿದ್ದರು.