ಸೋಮವಾರಪೇಟೆ, ಸೆ. ೨೭: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ನಗರದ ಸರ್ಕಾರಿ ಶಾಲಾ ಮೈದಾನದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರು ಹಾಗೂ ಪಂಚಾಯಿತಿ ಅಧಿಕಾರಿ-ಸಿಬ್ಬಂದಿ ವರ್ಗದವರಿಗೆ ಆಯೋಜಿಸಿದ್ದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಜೀವನ್ಕುಮಾರ್ ಮತ್ತು ದರ್ಶನ್ ತಂಡ ಪ್ರಥಮ, ವೀರೇಶ್ ಮತ್ತು ಆದಿಲ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದ ಗುಂಡು ಎಸೆಯುವ ಸ್ಪರ್ಧೆಯಲ್ಲಿ ಕೆ. ಆಶ್ರಿತ ಪ್ರಥಮ, ವನಿತ ದ್ವಿತೀಯ, ಶ್ವೇತಾ ತೃತೀಯ ಸ್ಥಾನ ಗಳಿಸಿದರು.
ಪುರುಷರ ವಿಭಾಗದಲ್ಲಿ ಚಂದ್ರಪ್ಪ ಪ್ರಥಮ, ಕೃಷ್ಣ ದ್ವಿತೀಯ, ವೀರೇಶ್ ತೃತೀಯ, ನಿಧಾನಗತಿಯ ಬೈಕ್ ಚಾಲನೆ ಸ್ಪರ್ಧೆಯಲ್ಲಿ ಹೆಚ್.ಪಿ. ಮಂಜುನಾಥ್ ಪ್ರ, ಜೀವನ್ಕುಮಾರ್ ದ್ವಿ, ದರ್ಶನ್ ತೃ, ಮಹಿಳೆಯರ ವಿಭಾಗದಲ್ಲಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಕ್ರಮವಾಗಿ ವನಿತ, ರಹಮತ್ ರೈನಾ, ಶಬೀನಾ, ಶಶಿಕಲಾ, ಮ್ಯೂಸಿಕಲ್ ಚೇರ್ನಲ್ಲಿ ದೇವಕಮ್ಮ, ಶಿವಮ್ಮ, ಅರ್ಪಿತ ಲೋಬೋ, ಮ್ಯಾಚಿಂಗ್ದ ಬಾಟಲ್ ಸ್ಪರ್ಧೆಯಲ್ಲಿ ಅಲವೇರು, ಶಶಿಕಲ, ಕಾಳಮ್ಮ ಅವರುಗಳು ಬಹುಮಾನ ಗಳಿಸಿದರು.
ಕ್ರಿಕೆಟ್ ಪಂದ್ಯಾಟದಲ್ಲಿ ದರ್ಶನ್ ಮತ್ತು ತಂಡ ಪ್ರಥಮ, ಮಂಜುನಾಥ್ ಮತ್ತು ತಂಡ ದ್ವಿತೀಯ ಸ್ಥಾನಗಳಿಸಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ.ಪಂ. ಅಧ್ಯಕ್ಷೆ ಜಯಂತಿ ಶಿವಕುಮಾರ್, ಮುಖ್ಯಾಧಿಕಾರಿ ನಾಚಪ್ಪ, ಸೂಡಾ ಅಧ್ಯಕ್ಷ ಕೆ.ಎ. ಆದಂ, ಪೌರ ಕಾರ್ಮಿಕರ ಸೇವಾ ಸಂಘದ ಜಿಲ್ಲಾಧ್ಯಕ್ಷ ಸತೀಶ್, ಪ.ಪಂ. ಸದಸ್ಯರುಗಳು ವಿಜೇತರಿಗೆ ಬಹುಮಾನ ವಿತರಿಸಿದರು.
ಇದೇ ಸಂದರ್ಭ ಕ್ರೀಡಾಕೂಟ ಹಾಗೂ ಪೌರ ಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜನೆ ಮಾಡಿದ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯಾಧಿಕಾರಿ ಜಾಸಿಂ ಖಾನ್, ಕರ ವಸೂಲಿಗಾರ ಜೀವನ್, ಸಿಬ್ಬಂದಿ ರೂಪಾ, ಪೌರ ಕಾರ್ಮಿಕರ ಸೇವಾ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಅವರುಗಳನ್ನು ಸ್ಥಳೀಯ ಘಟಕದ ವತಿಯಿಂದ ಸನ್ಮಾನಿಸಲಾಯಿತು.