*ಗೋಣಿಕೊಪ್ಪ, ಸೆ. ೨೭: ನೈತಿಕತೆಯೇ ಸ್ವಾತಂತ್ರö್ಯ ಅಭಿಯಾನದ ಮಹಿಳಾ ಜಾಗೃತಿ ಜಾಥಾ ಗೋಣಿಕೊಪ್ಪದಲ್ಲಿ ಸೆಪ್ಟೆಂಬರ್ ೨೯ ರಂದು ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಗೋಣಿಕೊಪ್ಪ ಘಟಕದ ಸಂಚಾಲಕಿ ಶಫೀನಾ ಮೊಹಮದ್ ತಿಳಿಸಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದಿಂದ ನಡೆಯುವ ಕಾರ್ಯಕ್ರಮವು ಬೆಳಿಗ್ಗೆ ೧೧ ಗಂಟೆಗೆ ಬಸ್ ನಿಲ್ದಾಣದ ಎದುರು ನಡೆಯಲಿದ್ದು, ಮಹಿಳೆಯರಲ್ಲಿ ಜಾಗೃತಿ ಹೆಚ್ಚಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸೆಪ್ಟೆಂಬರ್ ೧ ರಿಂದ ದೇಶಾದ್ಯಂತ ಅಭಿಯಾನ ನಡೆಯುತ್ತಿದ್ದು, ಮಹಿಳಾ ಸಮಾವೇಷ, ಗಣ್ಯ ವ್ಯಕ್ತಿಗಳ ಭೇಟಿ, ಸಂದರ್ಶನ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಮನೆ ಮನೆಗೆ ಭೇಟಿ, ಸತ್ಕಾರ ಕೂಟಗಳನ್ನು ನಡೆಸಲಾಗಿದೆ ಎಂದರು.

ಜಿಲ್ಲಾ ಮಹಿಳಾ ಸಂಚಾಲಕಿ ಜೈನಬ್ ರೆಹಮನ್ ಮಾತನಾಡಿ, ಅಭಿಯಾನದ ಸಮಾರೋಪ ಸಮಾರಂಭವನ್ನು ಅಕ್ಟೋಬರ್ ೬ ರಂದು ಅರಮೇರಿ ಕಳಂಚೇರಿ ಮಠದಲ್ಲಿ ಆಯೋಜಿಸಲಾಗಿದೆ. ಮಠದ ಅಧ್ಯಕ್ಷ ಸ್ವಾಮಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿದ್ದು, ಅನುಪಮ ಮಾಸಿಕ ಸಹ ಸಂಪಾದಕಿ ಸಬೀಹಾ ಪಾತಿಮಾ, ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಡಾ. ಎಚ್. ಎಂ ಕಾವೇರಿ ಉದ್ಘಾಟಿಸಲಿದ್ದಾರೆ.

ಸ್ಥಾನೀಯ ಜಮಾಅತ್ ಹೊಣೆಗಾರ್ತಿ ರಸೀನಾ ಜುಬೇರ್, ಗೋಣಿಕೊಪ್ಪ ಸ್ಥಾನೀಯ ಮಹಿಳಾ ಸಂಚಾಲಕಿ ಸನೀರಾ ತನ್ವಿರ್, ಜಮಅತ್ ನಿರ್ವಾಹಕಿ ನಸೀರಾ ರಶೀದ್ ಗೋಷ್ಠಿಯಲ್ಲಿದ್ದರು.