*ಗೋಣಿಕೊಪ್ಪಲು, ಸೆ. ೨೮: ವೀರಾಜಪೇಟೆ ತಾಲೂಕು ಸಹಕಾರಿ ನೌಕರರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಂ.ಎಸ್. ಕಾಳಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾಳಯ್ಯ ಅವರು, ಸಂಘವು ೨೦೨೩-೨೪ನೇ ಸಾಲಿನಲ್ಲಿ ರೂ. ೪.೬೦ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.

ಸಂಘದಲ್ಲಿ ೩೨೮ ಸದಸ್ಯರಿದ್ದು, ರೂಪಾಯಿ ೧೯.೪೪ ಲಕ್ಷ ಪಾಲು ಬಂಡವಾಳ ಇರುತ್ತದೆ. ದುಡಿಯುವ ಬಂಡವಾಳ ೩ ಕೋಟಿ ಇರುತ್ತದೆ ಎಂದು ತಿಳಿಸಿದರು. ಸದಸ್ಯರಿಗೆ ಶೇ. ೧೧ ರಷ್ಟು ಡಿವಿಡೆಂಡ್ ಘೋಷಿಸಲಾಯಿತು. ಉಪಾಧ್ಯಕ್ಷ ಎಂ.ಎA ಉತ್ತಪ್ಪ, ನಿರ್ದೇಶಕರು ಗಳಾದ ಜಿ.ಸಿ ಜೋಯಪ್ಪ, ಎ.ಜೆ. ವಿಜಯ್, ಹೆಚ್.ಡಿ. ಪೂವಯ್ಯ, ಪಿ.ಆರ್. ಮಣಿಕಂಠ, ಕೆ.ಎಂ. ಸೋಮಯ್ಯ, ಪಿ.ಎನ್. ಉಷಾ ಕುಮಾರಿ, ಎಂ.ಎಸ್. ಕಾವೇರಮ್ಮ, ಪಿ.ಎಸ್. ಮಾಲ, ಸಿ.ಇ.ಓ. ನರಸಿಂಹ ಕೆ ಉಪಸ್ಥಿತರಿದ್ದರು.