ಸೌಹಾರ್ದತೆ ಮೆರೆದ ನೈಮ ಸಂಘಟನೆ
ಸಿದ್ದಾಪುರ: ನೆಲ್ಲಿಹುದಿಕೇರಿ ಬೆಟ್ಟದಕಾಡು ವಿಘ್ನೇಶ್ವರ ಮಿತ್ರ ಮಂಡಳಿ ಹಾಗೂ ಅಮ್ಮ ಈಶ್ವರಿ ಮಿತ್ರ ಮಂಡಳಿ ವತಿಯಿಂದ ಗೌರಿ ಗಣೇಶ ವಿಸರ್ಜನೆ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು. ವಿದ್ಯುತ್ ಅಲಂಕೃತ ಮಂಟಪಗಳಲ್ಲಿ ಗೌರಿ ಗಣೇಶ ಮೂರ್ತಿಯನ್ನು ಕುಳ್ಳಿರಿಸಿ ಸಂಗೀತ ವಾದ್ಯ ಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಕಾವೇರಿ ನದಿಯಲ್ಲಿ ಮೂರ್ತಿ ವಿಸರ್ಜನೆ ಮಾಡಲಾಯಿತು. ಗೌರಿ ಗಣೇಶ ವಿಸರ್ಜನೋತ್ಸವ ಮೆರವಣಿಗೆ ಸಂದರ್ಭ ಯಂಗ್ ಮುಸ್ಲಿಂ ಅಸೋಸಿಯೇಷನ್ ನೈಮ ಸಂಘಟನೆ ಪದಾಧಿಕಾರಿಗಳು ಒಗ್ಗೂಡಿ ಮೆರವಣಿಗೆಯಲ್ಲಿ ಪಾಲ್ಗೊಂಡ ಬಾಂಧವರಿಗೆ ತಂಪು ಪಾನೀಯ ಮತ್ತು ಸಿಹಿ ತಿಂಡಿ ವಿತರಿಸಿ ಸೌಹಾರ್ದತೆ ಮೆರೆದರು. ಈ ಸಂದರ್ಭ ಗೌರಿ ಗಣೇಶ ವಿಸರ್ಜನೋತ್ಸವ ಸಮಿತಿಯ ಪ್ರಮುಖರು, ನೈಮ ಸಂಘಟನೆಯ ಪ್ರಮುಖರು ಹಾಜರಿದ್ದರು.
ಕಾಜೂರು
ಶನಿವಾರಸಂತೆ: ಸಮೀಪದ ಕಾಜೂರು ಗ್ರಾಮದಲ್ಲಿ ಕಾಜೂರು ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣಪತಿ ಮೂರ್ತಿಗಳನ್ನು ಹೂವು ಹಾಗೂ ವಿದ್ಯುತ್ ದೀಪಾಲಂಕೃತ ಮಂಟಪದ ವಾಹನದಲ್ಲಿರಿಸಿ ಗ್ರಾಮ ಹಾಗೂ ಶನಿವಾರಸಂತೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಕಾಜೂರು ಹೊಳೆಯಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ನೂರಾರು ಮಂದಿ ಗ್ರಾಮಸ್ಥರು ಸಂಗೀತಕ್ಕೆ ಹೆಜ್ಜೆ ಹಾಕಿ ನರ್ತಿಸುತ್ತಾ ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗದ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸೇವಾ ಸಮಿತಿಯ ಅಧ್ಯಕ್ಷ ಬಾಲಚಂದ್ರ, ಕಾರ್ಯದರ್ಶಿ ಸಂತೋಷ್, ಸದಸ್ಯರಾದ ಸಚಿನ್, ಜೀವನ್, ದಿಲೀಪ್, ಭರತ್, ಕೆ.ಸಿ. ಗಿರೀಶ್ ಇತರರು ಹಾಜರಿದ್ದರು.
ಮಾದಾಪುರ
ಐಗೂರು: ಮಾದಾಪುರದ ಸಿದ್ದಿಬುದ್ಧಿ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ೪೫ನೇ ವರ್ಷದ ಗೌರಿ ಗಣೇಶ ಮೂರ್ತಿಗೆ ೧೫ ದಿನಗಳ ಕಾಲ ಒಟ್ಟು ೪೫೦ ಕುಟುಂಬದ ಸೇವಾರ್ತಿಗಳಿಂದ ಪೂಜೆ, ದಾನಿ ಗಳಿಂದ ಅನ್ನಸಂತರ್ಪ ಣೆಗಳು ನಡೆದವು.
ಮೂರ್ತಿಗಳ ವಿಸರ್ಜನೋತ್ಸವದಂದು ಅಲಂಕರಿಸಿದ ಭವ್ಯವಾದ ಮಂಟಪದಲ್ಲಿ ಮೂರ್ತಿಗಳನ್ನು ಕುಳ್ಳಿರಿಸಿ, ವಾದ್ಯಗೋಷ್ಠಿಗಳೊಂದಿಗೆ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ಮಾದಾಪುರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕಾರೆಕಾಡಿಗೆ ತಲುಪಿ ಅಲ್ಲಿಂದ ವಾಪಸ್ ಬಂದು ಮಾದಾಪುರದ ಹೊಳೆಯಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಸಂದೇಶ, ಉಮೇಶ್, ಕೇಶವ, ಅಶೋಕ ಮತ್ತು ಉತ್ಸವ ಸಮಿತಿಯ ಜಯರಾಮ್, ಅಖಿಲೇಶ್, ಆಕಾಶ್, ಅವಿನಾಶ್, ದರ್ಶನ್, ದೀಪಕ್ ಮತ್ತು ಗಿರೀಶ್ ಭಾಗವಹಿಸಿದ್ದರು. ಶನಿವಾರಸಂತೆ: ಸಮೀಪದ ಕಾಜೂರು ಗ್ರಾಮದಲ್ಲಿ ಕಾಜೂರು ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣಪತಿ ಮೂರ್ತಿಗಳನ್ನು ಹೂವು ಹಾಗೂ ವಿದ್ಯುತ್ ದೀಪಾಲಂಕೃತ ಮಂಟಪದ ವಾಹನದಲ್ಲಿರಿಸಿ ಗ್ರಾಮ ಹಾಗೂ ಶನಿವಾರಸಂತೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಕಾಜೂರು ಹೊಳೆಯಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ನೂರಾರು ಮಂದಿ ಗ್ರಾಮಸ್ಥರು ಸಂಗೀತಕ್ಕೆ ಹೆಜ್ಜೆ ಹಾಕಿ ನರ್ತಿಸುತ್ತಾ ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗದ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸೇವಾ ಸಮಿತಿಯ ಅಧ್ಯಕ್ಷ ಬಾಲಚಂದ್ರ, ಕಾರ್ಯದರ್ಶಿ ಸಂತೋಷ್, ಸದಸ್ಯರಾದ ಸಚಿನ್, ಜೀವನ್, ದಿಲೀಪ್, ಭರತ್, ಕೆ.ಸಿ. ಗಿರೀಶ್ ಇತರರು ಹಾಜರಿದ್ದರು.
ಮಾದಾಪುರ
ಐಗೂರು: ಮಾದಾಪುರದ ಸಿದ್ದಿಬುದ್ಧಿ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ೪೫ನೇ ವರ್ಷದ ಗೌರಿ ಗಣೇಶ ಮೂರ್ತಿಗೆ ೧೫ ದಿನಗಳ ಕಾಲ ಒಟ್ಟು ೪೫೦ ಕುಟುಂಬದ ಸೇವಾರ್ತಿಗಳಿಂದ ಪೂಜೆ, ದಾನಿ ಗಳಿಂದ ಅನ್ನಸಂತರ್ಪ ಣೆಗಳು ನಡೆದವು.
ಮೂರ್ತಿಗಳ ವಿಸರ್ಜನೋತ್ಸವದಂದು ಅಲಂಕರಿಸಿದ ಭವ್ಯವಾದ ಮಂಟಪದಲ್ಲಿ ಮೂರ್ತಿಗಳನ್ನು ಕುಳ್ಳಿರಿಸಿ, ವಾದ್ಯಗೋಷ್ಠಿಗಳೊಂದಿಗೆ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ಮಾದಾಪುರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕಾರೆಕಾಡಿಗೆ ತಲುಪಿ ಅಲ್ಲಿಂದ ವಾಪಸ್ ಬಂದು ಮಾದಾಪುರದ ಹೊಳೆಯಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಸಂದೇಶ, ಉಮೇಶ್, ಕೇಶವ, ಅಶೋಕ ಮತ್ತು ಉತ್ಸವ ಸಮಿತಿಯ ಜಯರಾಮ್, ಅಖಿಲೇಶ್, ಆಕಾಶ್, ಅವಿನಾಶ್, ದರ್ಶನ್, ದೀಪಕ್ ಮತ್ತು ಗಿರೀಶ್ ಭಾಗವಹಿಸಿದ್ದರು.