ವೀರಾಜಪೇಟೆ, ಸೆ. ೨೭: ಕೊಡಗು ಮಾಜಿ ಸೈನಿಕರ ಸಹಕಾರ ಸಂಘ ನಿಯಮಿತ ವೀರಾಜಪೇಟೆ ಇವರ ಆಶ್ರಯದಲ್ಲಿ ವೀರಾಜಪೇಟೆ ಭಾರತೀಯ ಸ್ಟೇಟ್ ಬ್ಯಾಂಕ್ ಮುಂಭಾಗದಲ್ಲಿರುವ ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮರ ದಿನಾಚರಣೆಯ ಅಂಗವಾಗಿ ಮಹಾವೀರ ಚಕ್ರ ಪಡೆದ ಕರ್ನಲ್ ಪುಟ್ಟಿಚಂಡ ಗಣಪತಿ, ಮಡಿಕೇರಿ ಗೋಲ್ಡನ್ ಫಾಮ್ ಕ್ಯಾಂಟಿನ್ ವ್ಯವಸ್ಥಾಪಕ ಲೆಫ್ಟಿನೆಂಟ್ ಕರ್ನಲ್ ಮುಲ್ಲೆರ ಕಾವೇರಪ್ಪ ಅವರುಗಳು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸರ್ಕಾರದ ಪರವಾಗಿ ವೀರಾಜ ಪೇಟೆ ಗ್ರೇಡ್ ೨ ತಹಶೀಲ್ದಾರ್ ಪ್ರದೀಪ್ ಕುಮಾರ್, ಕೆ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಡಿ.ವೈ.ಎಸ್.ಪಿ. ಮೋಹನ್ ಕುಮಾರ್, ವೃತ್ತ ನಿರೀಕ್ಷಕ ಶಿವರುದ್ರ, ಕೊಡಗು ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಸೇರಿದಂತೆ ಕೊಡವ ಮುಸ್ಲಿಂ ಅಸೋಸಿಯೇಷನ್, ಕೊಡಗು ಮಲಯಾಳಿ ಸಮಾಜ, ಕಾವೇರಿ ಲಘು ವಾಹನ ಚಾಲಕರ ಮಾಲೀಕರ ಸಂಘ, ಕರ್ನಾಟಕ ಸಂಘ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲೆ, ಹಿಂದು ಮಲಯಾಳಿ ಸಮಾಜ, ವೀರಾಜಪೇಟೆ ಗೋಲ್ಡನ್ ಫಾರಂ, ಪುರಸಭೆ, ರೋಟರಿ, ಕಾವೇರಿ, ತ್ರಿವೇಣಿ, ಸಂತ ಅನ್ನಮ್ಮ ಶಾಲೆ, ಮಾಜಿ ಸೈನಿಕರು, ಸಾರ್ವಜನಿಕರು ಪುಷ್ಪಗುಚ್ಚ ಇರಿಸಿ ನಮನ ಸಲ್ಲಿಸಿದರು.
ಜಿಲ್ಲಾ ಸಶಸ್ತç ಮೀಸಲು ಪಡೆಯ ಚೆನ್ನಕೇಶವ ನೇತೃತ್ವದಲ್ಲಿ ಮೂರು ಸುತ್ತು ಕುಶಲತೋಪು ಹಾರಿಸಲಾಯಿತು. ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ, ಉಪಾಧ್ಯಕ್ಷ ರಾಜ ಚಂದ್ರಶೇಖರ್, ಕಾರ್ಯದರ್ಶಿ ಪುಗ್ಗೆರ ನಂದಾ, ಖಜಾಂಚಿ ತೋರೆರ ಪೂವಯ್ಯ, ನಿರ್ದೇಶಕ ಅಣ್ಣಳಮಾಡ ಸುಬ್ಬಯ್ಯ ಉಪಸ್ಥಿತರಿದ್ದರು.