ಮಡಿಕೇರಿ, ಸೆ. ೨೭: ಮಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಮಡಿಕೇರಿ ಮೂಲದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ಮಡಿಕೇರಿಯ ವಿದ್ಯಾನಗರ ನಿವಾಸಿ ಗಣೇಶ್ ಎಂಬವರ ಪುತ್ರ ಚಂದನ್ (೨೦) ಮೃತ ದುರ್ದೈವಿ.
ಗೌರಿ-ಗಣೇಶ ಹಬ್ಬಕ್ಕೆ ಮಡಿಕೇರಿಗೆ ಬಂದಿದ್ದ ಸಂದರ್ಭ ಚಂದನ್ಗಾಗಿ ಪೋಷಕರು ಹೊಸ ಬೈಕ್ ಖರೀದಿಸಿದ್ದರು. ಇತ್ತೀಚೆಗಷ್ಟೆ ಹೊಸ ಬೈಕ್ ಅನ್ನು ಚಂದನ್ ಮಂಗಳೂರಿಗೆ ಕೊಂಡೊಯ್ದಿದ್ದ. ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಕುಲಶೇಖರ ಬಳಿಯ ಶಾಲೆಯೊಂದರ ಮುಂಭಾಗ ಟ್ಯಾಂಕರ್ ಹಾಗೂ ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ. ಪರಿಣಾಮ ತೀವ್ರ ರಕ್ತಸ್ರಾವಗೊಂಡು, ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲಿ ಚಂದನ್ ಮೃತಪಟ್ಟಿದ್ದಾನೆ.
ಡಿಕ್ಕಿಯ ರಭಸಕ್ಕೆ ಚಂದನ್ ಧರಿಸಿದ್ದ ಹೆಲ್ಮೆಟ್ಗೆ ಹಾನಿಯಾಗಿ ಮೆದುಳು ಹೊರ ಬಂದಿದೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಅಲ್ಲಿನ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.