ವೀರಾಜಪೇಟೆ, ಸೆ. ೨೭: ಒಂದು ಗ್ರಾಮ ಅಥವಾ ನಗರ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿಗಿರುವ ರಸ್ತೆ ಸಂಪರ್ಕ ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ. ರಸ್ತೆ ಉತ್ತಮವಾಗಿದ್ದರೆ ವ್ಯಾಪಾರ-ವಹಿವಾಟು, ಸರಕು ಸಾಗಾಣಿಕೆ ಇನ್ನಿತರ ಚಟುವಟಿಕೆಗಳು ನಡೆದು ರಸ್ತೆಯು ಹಾದು ಹೋಗುವ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ. ಆದರೆ ಬಿಟ್ಟಂಗಾಲದ ಜಂಕ್ಷನ್‌ನಿAದ ಪೆರುಂಬಾಡಿಗೆ ತೆರಳುವ ಬೈಪಾಸ್ ರಸ್ತೆ ಇದಕ್ಕೆ ವಿರುದ್ಧವಾಗಿದೆ. ರಾಷ್ಟಿçÃಯ ಹೆದ್ದಾರಿ ೬೬ ಕೆ ಸಂಪರ್ಕ ಕಲ್ಪಿಸುವ ಬಾಳುಗೋಡು ಬಳಿ ಈ ಬೈಪಾಸ್ ರಸ್ತೆಯ ಪರಿಸ್ಥಿತಿ ಹೇಳತೀರದಾಗಿದೆ.

ನಗರ ಪ್ರದೇಶದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ದೊಡ್ಡ ದೊಡ್ಡ ವಾಹನಗಳು ಸರಕುಗಳೊಂದಿಗೆ ಸಾಗಲು ಬೈಪಾಸ್ ರಸ್ತೆ ಅನುಕೂಲಕರವಾಗಿದ್ದು ಅದರಂತೆ ಮೈಸೂರು ಹಾಗೂ ಕೇರಳದ ನಡುವೆ ನಿರಂತರ ವ್ಯಾಪಾರ ವಹಿವಾಟು ನಡೆಯುತ್ತಲಿದ್ದು ಕೇರಳದಿಂದ ಮೈಸೂರಿಗೆ, ಮೈಸೂರಿನಿಂದ ಕೇರಳಕ್ಕೆ ಹೋಗುವ ವಾಹನಗಳು ವೀರಾಜಪೇಟೆ ನಗರದ ಮೂಲಕ ಸಾಗುವುದು ಬಹಳ ಕಡಿಮೆ. ಹೆಚ್ಚಿನ ವಾಹನಗಳು ಬಿಟ್ಟಂಗಾಲ ಬಾಳುಗೋಡು ಪೆರುಂಬಾಡಿ ಮೂಲಕ ಬೈಪಾಸ್ ರಸ್ತೆಯಲ್ಲಿ ಸಾಗಿ ರಾಷ್ಟಿçÃಯ ಹೆದ್ದಾರಿ ೬೬ ಅನ್ನು ಸಂಪರ್ಕಿಸುತ್ತವೆ. ಆದರೆ ಈ ಬೈಪಾಸ್ ರಸ್ತೆಯು ಕಳೆದ ಹಲವು ವರ್ಷಗಳಿಂದ ಡಾಂಬರೀಕರಣಗೊAಡಿಲ್ಲ. ರಸ್ತೆಯಲ್ಲಿ ನಿರ್ಮಾಣವಾಗಿರುವ ಕೆಲವು ಗುಂಡಿಗಳನ್ನು ಮುಚ್ಚುವ ಕಾರ್ಯಗಳನ್ನು ಹೊರತುಪಡಿಸಿದರೆ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಇನ್ಯಾವುದೇ ಕಾರ್ಯ ಇಲ್ಲಿ ನಡೆದಿಲ್ಲ.

ಈ ವರ್ಷ ಸುರಿದ ಧಾರಾಕಾರ ಮಳೆಯಿಂದಾಗಿ ಉಳಿದಿದ್ದ ಅಲ್ಪ ಪ್ರಮಾಣದ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ಕೆಲವು ಕಡೆ ರಸ್ತೆ ಮಾಯವಾಗಿಬಿಟ್ಟಿದೆ. ಸದ್ಯದ ಮಟ್ಟಿಗೆ ಸಂಪೂರ್ಣ ಹಾಳಾದ ರಸ್ತೆಯ ಭಾಗದಲ್ಲಿ ಜಲ್ಲಿಕಲ್ಲುಗಳು ಹಾಗೂ ವೇಸ್ಟ್ ಹಾಕಿ ಸಂಪರ್ಕವನ್ನು ಮುಂದುವರಿಸಲಾಗುತ್ತಿದೆ. ನಿರಂತರವಾಗಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿAದ ಕಲ್ಲುಗಳು ಸಡಿಲಗೊಂಡು ದ್ವಿ ಚಕ್ರ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಈ ಮಾರ್ಗದಲ್ಲಿ ಸಂಚರಿಸುವುದು ಬಹಳ ಕಷ್ಟವಾಗಿದೆ.

ರಸ್ತೆಯ ಮೇಲೆ ಜಲ್ಲಿಕಲ್ಲು

ವರ್ಷದಿಂದ ವರ್ಷಕ್ಕೆ ರಸ್ತೆ ಸ್ವಲ್ಪ ಸ್ವಲ್ಪವಾಗಿ ಕಿತ್ತು ಹಾಳಾಗಿದ್ದು, ಇದರಿಂದ ಈ ಡಾಂಬರೀಕರಣದ ಸಂದರ್ಭ ರಸ್ತೆಗೆ ಹಾಕಿದ್ದ ಜಲ್ಲಿ ಕಲ್ಲುಗಳು ಹಾಗೂ ಇತ್ತೀಚೆಗೆ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಹಳ್ಳಗಳನ್ನು ಮುಚ್ಚಲು ಹಾಕಿದಂತಹ ಜಲ್ಲಿ ಕಲ್ಲುಗಳು ಸಂಪೂರ್ಣವಾಗಿ ಸಡಿಲಗೊಂಡು ರಸ್ತೆಯ ತುಂಬಾ ಕಲ್ಲುಗಳೆ ಕಾಣಿಸುತ್ತದೆ. ಮಕ್ಕಳ ಶಾಲಾ ಬಸ್ ಹಾಗೂ ದೊಡ್ಡ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಬಿಡಿ ಕಲ್ಲುಗಳು ರಟ್ಟುವ ಭಯದಲ್ಲಿ ಸಂಚರಿಸುವAತಹ ವಾತಾವರಣ ಸೃಷ್ಟಿಯಾಗಿದೆ.

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ

ಬೈಪಾಸ್ ರಸ್ತೆಯ ಹೆಚ್ಚಿನ ಭಾಗವು ಗುಡ್ಡ ಪ್ರದೇಶದಿಂದ ಕೂಡಿದ್ದು, ಮಳೆಗಾಲದ ಸಂದರ್ಭ ಗುಡ್ಡದ ಮೇಲೆ ಬಂದAತಹ ಮಳೆಯ ನೀರು ನಿರಂತರವಾಗಿ ರಸ್ತೆಯ ಮೇಲೆ ಹರಿದು ಬರುತ್ತದೆ. ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಸಂಪೂರ್ಣ ಮಳೆಗಾಲದವರೆಗೂ ಮಳೆಯ ನೀರು ಗುಡ್ಡದ ಮೇಲಿನಿಂದ ಇಳಿದು ರಸ್ತೆಯ ಮೇಲೆ ಸಾಗಿ ನಂತರ ಇಳಿಜಾರನ್ನು ಸೇರುತ್ತಿದೆ. ಇದರಿಂದ ಕೆಲವು ಭಾಗಗಳಲ್ಲಿ ರಸ್ತೆಯು ಸಂಪೂರ್ಣವಾಗಿ ಮಾಯವಾಗಿದೆ. ಕೆಲವು ಭಾಗಗಳಲ್ಲಂತೂ ದೊಡ್ಡ ದೊಡ್ಡ ಹಳ್ಳಗಳು ನಿರ್ಮಾಣವಾಗಿ ಸಂಚಾರಕ್ಕೆ ತೊಡಕು ಉಂಟಾಗಿದೆ.

ನಗರದಲ್ಲಿ ವಾಹನ ದಟ್ಟಣೆ

ಪೆರುಂಬಾಡಿಯಿAದ ಬಿಟ್ಟಂಗಾಲಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯು ೫ ಕಿಲೋ ಮೀಟರ್ ಇದ್ದು ಈ ರಸ್ತೆ ಹದಗೆಟ್ಟಿರುವ ಕಾರಣ ಕೇರಳ, ಮೈಸೂರು ಸಂಚರಿಸುವ ವಾಹನಗಳು ವೀರಾಜಪೇಟೆ ನಗರದ ಮೂಲಕವೇ ಸಂಚರಿಸುತ್ತಿವೆ. ಇದರ ಪರಿಣಾಮವಾಗಿ ನಗರದಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾರಾಂತ್ಯದಲ್ಲAತ್ತೂ ವೀರಾಜಪೇಟೆ ನಗರದಲ್ಲಿ ಕಾಣಸಿಗುವ ವಾಹನಗಳಲ್ಲಿ ಹೆಚ್ಚಿನವು ಕೇರಳಕ್ಕೆ ಸೇರಿದವು ಆಗಿರುತ್ತವೆ.