ಗೋಣಿಕೊಪ್ಪಲು, ಸೆ. ೨೭: ೯೦ನೇ ವರ್ಷದ ಗಣೇಶೋತ್ಸವ ಮುಂದೆ ಶತಮಾನದ ಕಡೆಗೆ ನಿರ್ವಿಘ್ನವಾಗಿ ಸಾಗಲಿ, ಗೌರಿ ಗಣೇಶ ಉತ್ಸವದಂದು ಎಲ್ಲಾ ಧರ್ಮಿಯರು ಸೌಹಾರ್ದತೆಯಿಂದ ಭಾಗವಹಿಸುವ ಮೂಲಕ ನಮ್ಮ ಪದ್ಧತಿ ಪರಂಪರೆಯನ್ನು ಮುಂದುವರೆಸಿಕೊAಡು ಹೋಗಬೇಕು ಎಂದು ಹಿರಿಯ ಪತ್ರಕರ್ತ ಚಿ.ನಾ. ಸೋಮೇಶ್ ಹೇಳಿದರು.

ಇತಿಹಾಸ ಪ್ರಸಿದ್ಧ ಅಮ್ಮತ್ತಿಯ ಶ್ರೀ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಪಟ್ಟಣದಲ್ಲಿ ಆಯೋಜನೆಗೊಂಡಿದ್ದ ೯೦ನೇ ವರ್ಷದ ಗೌರಿ-ಗಣೇಶ ವಿಸರ್ಜನೆ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲಿಯೂ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಪೊಲೀಸರು ಕ್ರಮ ವಹಿಸಿ ಹಬ್ಬವನ್ನು ಯಶಸ್ವಿಗೊಳಿಸುತ್ತಿದ್ದಾರೆ. ಆದರೂ ಹಲವೆಡೆ ಅಹಿತಕರ ಘಟನೆ ನಡೆದಿರುವುದು ಸರಿಯಲ್ಲ. ನಾವುಗಳೆಲ್ಲರೂ ಸೌಹಾರ್ದತೆಯಿಂದ ಬಾಳಬೇಕು. ಇದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ, ನೆಲೆಸಲಿದೆ ಎಂದರು. ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷರಾದ ಮಾಚಿಮಂಡ ಮಧು ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಪ್ರಿನ್ಸ್ಗಣಪತಿ, ಪ್ರಧಾನ ಕಾರ್ಯದರ್ಶಿಗಳಾದ ಪಟ್ರಪಂಡ ಸೋಮೇಶ್, ಪಿ. ಹರಿ, ಕಾನೂನು ಸಲಹೆಗಾರರಾದ ಬಿದ್ದಂಡ ಪ್ರಥಮ್, ಜಯ ಉತ್ತಪ್ಪ, ನಾಯಡ ಪವಿ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ನಿರ್ದೇಶಕ ಕುಟ್ಟಂಡ ರವಿ ಸ್ವಾಗತಿಸಿ, ವಂದಿಸಿದರು.

ವೇದಿಕೆಯಲ್ಲಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಂಜಾನೆ ವೇಳೆ ಗೌರಿಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.