ಮಡಿಕೇರಿ, ಸೆ. ೨೬: ಕಾಲೇಜು ಶಿಕ್ಷಣ ಇಲಾಖೆ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶ, ಎನ್‌ಎಸ್‌ಎಸ್, ರೋರ‍್ಸ್ ಮತ್ತು ರೇಂರ‍್ಸ್ ಘಟಕ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇವರ ಸಹಯೋಗದಲ್ಲಿ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರ ತಾ. ೨೭ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ. ಅನನ್ಯ ವಾಸುದೇವ್, ಎನ್‌ಡಿಆರ್‌ಎಫ್ ಇನ್ಸ್ಪೆಕ್ಟರ್ ಶ್ರೀರಾಮ್ ಬಜ್, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಚಾಲಕ ಐಕ್ಯೂಎಸಿ ಡಾ. ಕೆ. ಬಸವರಾಜು, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋರ‍್ಸ್ ಅಧಿಕಾರಿ ಹೆಚ್.ಎಸ್. ವೇಣುಗೋಪಾಲ್, ರೇಂರ‍್ಸ್ ಅಧಿಕಾರಿ ರಾಖಿ ಪೂವಣ್ಣ ಎಂ., ಎನ್.ಎಸ್.ಎಸ್. ಅಧಿಕಾರಿ ರುದ್ರ, ಇತರರು ಪಾಲ್ಗೊಳ್ಳಲಿದ್ದಾರೆ.