ಕಣಿವೆ, ಸೆ. ೨೬: ಕುಶಾಲನಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರಪ್ಪ ಕೂಡಿಗೆಯ ಡಯಟ್ ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಕೂಡಿಗೆಯ ಡಯಟ್ ಮೈದಾನದಲ್ಲಿ ಈ ಭಾಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಯುವಿಹಾರ ನಡೆಸುತ್ತಿದ್ದಾರೆ. ಆದರೆ ವಾಯುವಿಹಾರಿಗಳಿಗೆ ಅನುಕೂಲವಾಗುವ ವಾಕಿಂಗ್ ಪಾತ್ ಇಲ್ಲದೇ ಮೈದಾನದ ಸುತ್ತಲೂ ಕಾಡು ಗಿಡ ಬೆಳೆದಿದ್ದು, ಅದನ್ನು ತೆರವುಗೊಳಿಸಿ ವಿದ್ಯುತ್ ಕಂಬಗಳೊAದಿಗೆ ವಿದ್ಯುತ್ ದೀಪಗಳನ್ನು ಅಳವಡಿಸಿ ಸೌಲಭ್ಯ ಅಳವಡಿಸಬೇಕು.
ಈ ಬಗ್ಗೆ ತಾಲೂಕು ಪಂಚಾಯಿತಿಯ ವಿಶೇಷ ಅನುದಾನಗಳಿಂದ ಅಭಿವೃದ್ದಿಗೆ ಆದ್ಯತೆ ನೀಡುವ ಬಗ್ಗೆ ಇಓ ಪರಮೇಶ್ವರಪ್ಪ ಭರವಸೆ ನೀಡಿದರು. ಈ ಸಂದರ್ಭ ಎನ್ಆರ್ಇಜಿ ಸಹಾಯಕ ನಿರ್ದೇಶಕ ರಾಕೇಶ್, ಕೂಡುಮಂಗಳೂರು ಗ್ರಾಪಂ ಪಿಡಿಓ ಸಂತೋಷ್ ಇದ್ದರು.