ವೀರಾಜಪೇಟೆ, ಸೆ. ೨೬: ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಅಕ್ಟೋಬರ್‌ನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಈ ಬಾರಿ ಸುಮಾರು ಹನ್ನೆರಡು ತಂಡಗಳು ಭಾಗವಹಿಸಲಿದ್ದು, ಐಪಿಎಲ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ ಎಂದು ಆಯೋಜಕರಾದ ನಿತಿನ್ ಲೇಪು ಹೇಳಿದರು. ಪಂದ್ಯಾಟಕ್ಕೆ ಸಂಬAಧಪಟ್ಟAತೆ ವೀರಾಜಪೇಟೆ ಹೊರವಲಯದ ರೆಸಾರ್ಟ್ನಲ್ಲಿ ಇತ್ತೀಚೆಗೆ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಹನ್ನೊಂದು ತಂಡಗಳ ಮಾಲೀಕರು ತಮ್ಮ ತಮ್ಮ ಆಟಗಾರರನ್ನು ಬಿಡ್ಡಿಂಗ್ ಮೂಲಕ ಖರೀದಿ ಮಾಡಿದರು.

ವೀರಾಜಪೇಟೆ ನಗರ, ಬಿಟ್ಟಂಗಾಲ, ಕಡಂಗದ ಆಟಗಾರರು ಈ ಬಾರಿ ತಮ್ಮ ಕ್ರೀಡಾ ಪ್ರದರ್ಶನ ನೀಡಲಿದ್ದಾರೆ ಎಂದು ಆಯೋÃಜಕರಾದ ನಿತಿನ್ ಲೇಪು ಮಾಹಿತಿ ನೀಡಿದರು. ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ, ಈ ಬಾರಿ ಮಹಿಳಾ ಕ್ರಿಕೆಟ್ ತಂಡಗಳು ಆಗಮಿಸಿ ತಮ್ಮ ಪ್ರತಿಭೆಯನ್ನು ತೋರಲಿದ್ದಾರೆ. ಅಲ್ಲದೇ ಮಕ್ಕಳು ಈ ಬಾರಿಯ ರಜೆಯನ್ನು ಪ್ರತಿದಿನವೂ ಮೈದಾನದಲ್ಲಿ ಕಳೆಯಬೇಕು. ಮೊಬೈಲ್ ಹಾಗೂ ಟಿವಿ ಮುಂದೆ ಸಮಯ ವ್ಯರ್ಥ ಮಾಡಬಾರದು ಎಂಬ ಉದ್ದೇಶದಿಂದ ದಸರಾ ರಜೆ ವೇಳೆ ಪಂದ್ಯಾಟ ಆಯೋಜಿಸಲಾಗಿದೆ. ಇದರಿಂದ ಮಕ್ಕಳು ಮಾನಸಿಕವಾಗಿ ಬೇರೆ ಬೇರೆ ರೀತಿಯಲ್ಲಿ ಬೆರೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭ ಆಯೋಜಕರಾದ ಅತೀಫ್ ಮನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.