ಕೂಡಿಗೆ, ಸೆ. ೨೬: ಆನೆಕಾಡು ಮೀಸಲು ಅರಣ್ಯ ಪ್ರದೇಶದಿಂದ ಕಾಡಾನೆಗಳು ಹಾರಂಗಿ ನದಿ ಸಮೀಪದ ಬೆಂಡೆಬೆಟ್ಟ ಅರಣ್ಯದ ಮೂಲಕ ಹುದುಗೂರು, ಕಾಳಿದೇವನ ಹೊಸೂರು ಭಾಗದ ಜಮೀನಿಗೆ ದಾಳಿ ಮಾಡಿ ಕೃಷಿ ಫಸಲು ನಾಶಗೊಳಿಸಿವೆ. ಗ್ರಾಮದ ಕಾವೇರಮ್ಮ, ರಮೇಶ್, ಚಂಗಪ್ಪ, ಕೀರ್ತಿ ಎಂಬವರ ಜಮೀನಿಗೆ ಕಾಡಾನೆಗಳು ದಾಳಿ ಮಾಡಿವೆ. ಸ್ಥಳಕ್ಕೆ ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.