ಚೆಯ್ಯಂಡಾಣೆ, ಸೆ. ೨೬: ವೀರಾಜಪೇಟೆ ಅನ್ವಾರುಲ್ ಹುದಾ ಹಾಗೂ ಸುನ್ನಿ ಸಂಘ ಸಂಯುಕ್ತ ಆಶ್ರಯದಲ್ಲಿ ತಾ. ೨೭ ರಂದು (ಇಂದು) ವೀರಾಜಪೇಟೆಯಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥಾ ನಡೆಯಲಿದೆ.
ಮಧ್ಯಾಹ್ನ ೩ ಗಂಟೆಗೆ ಜಾಥಾವು ಪಂಜರ್ಪೇಟೆಯಿAದ ಆರಂಭಗೊAಡು ಕೆ.ಎಸ್.ಆರ್.ಟಿ.ಸಿ., ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣ, ಮೀನುಪೇಟೆ ಮೂಲಕ ಅನ್ವಾರ್ ಕ್ಯಾಂಪಸ್ನಲ್ಲಿ ಸಮಾಪನಗೊಳ್ಳಲಿದೆ.
ಸಂಜೆ ೬.೩೦ಕ್ಕೆ ಅಸ್ಮಾಉಲ್ ಹುಸ್ನಾ ರಾತೀಬ್, ೭.೩೦ಕ್ಕೆ ವಾಗ್ಮಿ ಜಬ್ಬಾರ್ ಸಖಾಫಿ ಪಾತೂರ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಮಿಲಾದ್ ಜಾಥಾದ ಸ್ವಾಗತ ಸಮಿತಿಯ ಛೇರ್ಮನ್ ಖಾಲಿದ್ ಫೈಝಿ ಅಂಬಟ್ಟಿ ಹಾಗೂ ಕನ್ವೀನರ್ ಹಂಝ ಮದನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.