ಮಡಿಕೇರಿ, ಸೆ. ೨೬: ಚೆಟ್ಟಳ್ಳಿ ಸಮೀಪದ ಕಂಡಕರೆಯ ಗಾಂಧಿ ಯುವಕ ಸಂಘದ ಅಧ್ಯಕ್ಷರಾಗಿ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಪುನರಾಯ್ಕೆಯಾಗಿದ್ದಾರೆ.

ಕಂಡಕರೆಯ ಬ್ರೆöÊಟ್ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆದ ಗಾಂಧಿ ಯುವಕ ಸಂಘದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಸಂಘದ ನೂತನ ಹಿರಿಯ ಉಪಾಧ್ಯಕ್ಷರಾಗಿ ಷರೀಫ್ ಪಿ.ಎಂ, ಉಪಾಧ್ಯಕ್ಷರಾಗಿ ಇರ್ಷಾದ್ ಕೆ.ಎಂ, ಪ್ರಧಾನ ಕಾರ್ಯದರ್ಶಿಯಾಗಿ ಸವಾದ್ ಉಸ್ಮಾನ್, ಕಾರ್ಯದರ್ಶಿಯಾಗಿ ಅಜಿನಾನ್ ಪಿ.ಎಂ, ಸಂಘಟನಾ ಕಾರ್ಯದರ್ಶಿಯಾಗಿ ಉವೈಸ್ ಸಿ.ಎ, ಮೊಹಮ್ಮದ್ ಶಿಬಲ್ ಕೆ.ಜೆ, ಖಜಾಂಜಿಯಾಗಿ ಸುಹೈಲ್ ಒ.ಎಸ್ ಆಯ್ಕೆಯಾಗಿದ್ದಾರೆ.

ಸಂಘದ ನೂತನ ನಿರ್ದೇಶಕರಾಗಿ ಉನೈಸ್ ಕೆ.ಎಂ. ಅಫ್ನಾನ್ ಪಿ.ಎಂ. ಶಮ್ಮಾಸ್, ಹರ್ಷಾದ್, ಅಫ್ಸಲ್ ಸಿ.ಎಸ್, ಇಮ್ರಾನ್ ಆಲಿ ಹಾಗೂ ಮೊಹಮ್ಮದ್ ಸಿದ್ದೀಖ್ ಆಯ್ಕೆಯಾಗಿದ್ದಾರೆ.

ಅಕ್ಟೋಬರ್ ೦೨ ರಂದು ಕಂಡಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ಮಾಡುವುದರ ಮೂಲಕ ಗಾಂಧಿ ಜಯಂತಿಯನ್ನು ಆಚರಿಸಲು ತೀರ್ಮಾನಿಸಲಾಯಿತು.