ಕಡAಗ, ಸೆ. ೨೬: ಕಡಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೪೮ನೇ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೋಡಿರ ಎಂ. ತಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದಿAದ ಕಡಂಗದಲ್ಲಿ ೧೮ ವರ್ಷ ಅಧ್ಯಕ್ಷರಾಗಿ ಹಾಗೂ ೫ ವರ್ಷ ನಿರ್ದೇಶಕರಾಗಿ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪಾಂಡAಡ ಕಿಟ್ಟು ಅಪ್ಪಣ್ಣ ಅವರನ್ನು ಹಿರಿಯ ಸಹಕಾರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಂಘದ ಕಾರ್ಯವ್ಯಾಪ್ತಿಗೆ ಬರುವ ರೈತರಾದ ಕೋಡಿರ ಪೃಥ್ವಿ ಮಂದಣ್ಣ, ಕುಲ್ಲಚಂಡ ಹರ್ಷ ಮಂದಣ್ಣ ಹಾಗೂ ಐತಿಚಂಡ ಪ್ರಕಾಶ್ ಕಾರ್ಯಪ್ಪ ಅವರಿಗೆ ೨೦೨೩-೨೪ನೇ ಸಾಲಿನ ಪ್ರಗತಿಪರ ರೈತ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಂಘವು ಅರಪಟ್ಟು ಪೊದವಾಡ ಮತ್ತು ಕರಡ ಗ್ರಾಮದ ಕಾರ್ಯವ್ಯಾಪ್ತಿ ಹೊಂದಿದ್ದು, ಪ್ರಸಕ್ತ ವರ್ಷದಲ್ಲಿ ಒಟ್ಟು ೮೭೫ ಜನ ಸದಸ್ಯರಿದ್ದು, ರೂ. ೬೯.೦೩ ಲಕ್ಷ ಪಾಲು ಬಂಡವಾಳ ಸಂಗ್ರಹಿಸಿದೆ.

೨೦೨೩-೨೪ನೇ ಸಾಲಿನಲ್ಲಿ ಎಲ್ಲ ತರಹದ ವ್ಯಾಪಾರ ವಹಿವಾಟು ನಡೆಸಿ ರೂ. ೨೧.೬೪ ಲಕ್ಷದಷ್ಟು ನಿವ್ವಳ ಲಾಭ ಗಳಿಸಿದೆ.

ಪ್ರಸ್ತುತ ೨೦೨೩-೨೪ನೇ ಸಾಲಿಗೆ ಶೇ. ೧೨ ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸಂಘವು ಪ್ರಸ್ತುತ ಸಾಲಿನಲ್ಲಿ ರೂ. ೧೨.೭೦ ಕೋಟಿ ವಿವಿಧ ರೀತಿಯ ಠೇವಣಿಯನ್ನು ಸಂಗ್ರಹಿಸಿದೆ.

ಸAಘವು ೨೦೨೩-೨೪ನೇ ಸಾಲಿನಲ್ಲಿ ರೂ. ೧೨.೪೩ ಕೋಟಿ ಕೆ.ಸಿ.ಸಿ. ಸಾಲ, ಪಿಗ್ಮಿ ಓಡಿ ಸಾಲ, ಸ್ವ-ಸಹಾಯ ಗುಂಪುಗಳ ಸಾಲ ಮತ್ತು ಠೇವಣಿ ಮೇಲಿನ ಸಾಲವನ್ನು ನೀಡಿ, ಶೇ. ೧೦೦ ರಷ್ಟು ಸಾಲವಸೂಲಿಯಾಗಿದ್ದು, ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ನಂಬಿಯಪAಡ ಮಣಿ ಅಯ್ಯಮ್ಮ, ನಿರ್ದೇಶಕರಾದ ಕೋಡಿರ ವಿನೋದ್ ನಾಣಯ್ಯ, ಮೇದುರ ಗಣು ಕುಶಾಲಪ್ಪ, ನೆಲ್ಲಚಂಡ ಕಿರಣ್ ಕಾರ್ಯಪ್ಪ, ಐತಿಚಂಡ ಪಿ. ಮಾದಯ್ಯ, ಪಾಂಡAಡ ಎಂ. ಸುಬ್ರಮಣಿ, ಕೈಪಂಗಡ ಉತ್ತಪ್ಪ, ಬೇಪಡಿಯಂಡ ಜಾನ್ಸಿ ಸುಬ್ಬಯ್ಯ, ಕಣಿಯಡ ಜೆ. ಶಾರದ, ಹೆಚ್.ಕೆ. ಗಂಗಮ್ಮ, ಐತಿಚಂಡ ವನಿತ ಕಾರ್ಯಪ್ಪ, ಎಂ.ಎ. ಸೋಮಯ್ಯ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್. ಸೋನಿಯ ಮತ್ತು ಸಿಬ್ಬಂದಿ ವರ್ಗ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.