ಭಾಗಮAಡಲ, ಸೆ. ೨೬: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕೊಡಗು ಜಿಲ್ಲೆ ಮತ್ತು ಶ್ರೀ ಕಾವೇರಿ ಪದವಿಪೂರ್ವ ಕಾಲೇಜು ಭಾಗಮಂಡಲ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕು ಪದವಿಪೂರ್ವ ಕಾಲೇಜು ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟ ಏರ್ಪಡಿಸಲಾಗಿತ್ತು.
ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಅವರು ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ದಿವಾಕರ ಕೆ ಜೆ. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಚೆದುಕಾರು ಪೆಮಿತ ಸಂದೀಪ್ ಕುಮಾರ್, ಅಮೆ ನಿತ್ಯಾನಂದ, ಅರುಣಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ದಾಯನ ರಾಮಕೃಷ್ಣ, ಭಾರತಿ ಪದವಿಪೂರ್ವ ಕಾಲೇಜು ಮರಗೋಡಿನ ಮಹೇಶ್ ಬಿ.ಟಿ. ಹಾಗೂ ವಿವಿಧ ಕಾಲೇಜುಗಳ ಉಪನ್ಯಾಸಕರು ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ತೀರ್ಪುಗಾರರು ಉಪಸ್ಥಿತರಿದ್ದರು.
ಬಾಲಕರ ವಿಭಾಗದಲ್ಲಿ ಒಟ್ಟು ೧೨ ತಂಡಗಳು ಮತ್ತು ಬಾಲಕಿಯರ ವಿಭಾಗದಲ್ಲಿ ಒಟ್ಟು ಆರು ತಂಡುಗಳು ಭಾಗವಹಿಸಿದ್ದವು. ಬಾಲಕರ ವಿಭಾಗದ ಫೈನಲ್ ಪಂದ್ಯವು ರಫೆಲ್ ಪದವಿಪೂರ್ವ ಕಾಲೇಜು ಹೊದವಾಡ ಮತ್ತು ಸಂತ ಮೈಕಲರ ಪದವಿಪೂರ್ವ ಕಾಲೇಜು ಮಡಿಕೇರಿ ನಡುವೆ ನಡೆದು ರಫೆಲ್ ಕಾಲೇಜು ತಂಡವು ಚಾಂಪಿಯನ್ಸ್ ಆಗಿ ಹೊರಹೊಮ್ಮಿದರು.
ಬಾಲಕಿಯರ ವಿಭಾಗದಲ್ಲಿ ಸಂಪಾಜೆ ಪದವಿಪೂರ್ವ ಕಾಲೇಜು ತಂಡವು ವಿಜಯ ಸಾಧಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು. ತೀರ್ಪುಗಾರರಾಗಿ ಸಾಯಿ ಶಂಕರ ಕಾಲೇಜಿನ ಸುಬ್ಬಯ್ಯ, ಮೂರ್ನಾಡು ಕಾಲೇಜಿನ ಮಂಜು, ಮರಗೋಡು ಕಾಲೇಜಿನ ಕೃಷ್ಣ ಕೆ.ಎಸ್., ಬೆಂಗಳೂರಿನ ರಧೀಶ್ ಜಾನ್ಸನ್ ನಿರ್ವಹಿಸಿದರು. ಸುಬ್ರಹ್ಮಣ್ಯದ ನಿರಂತ್ ದೇವಸ್ಯ ವೀಕ್ಷಕ ವಿವರಣೆ ನೀಡಿದರು.
ಫೈನಲ್ ಪಂದ್ಯದ ನಂತರ ವಿಜೇತ ತಂಡಗಳಿಗೆ ಕಾಲೇಜಿನ ಪ್ರಾಂಶುಪಾಲ ದಿವಾಕರ ಕೆ.ಜಿ. ಬಹುಮಾನ ವಿತರಿಸಿದರು.