ಸೋಮವಾರಪೇಟೆ, ಸೆ. ೨೬: ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ೪೦ ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇ. ೧೮ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಾಪಂಡ ಉಮೇಶ್ ತಿಳಿಸಿದರು.

ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ಸಂಘದ ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿAದ ನೀಡಲಾಗುವ ಅತ್ಯುತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಗೆ ಸೋಮವಾರಪೇಟೆ ತಾಲೂಕಿನಿಂದ ಮಾದಾಪುರ ಸಹಕಾರ ಸಂಘ ಆಯ್ಕೆಯಾಗಿದೆ. ಸಂಘದ ಆಡಳಿತ ಮಂಡಳಿ ಹಾಗೂ ಎಲ್ಲ ಸದಸ್ಯರ ಸಹಕಾರದಿಂದ ಈ ಪ್ರಶಸ್ತಿ ಲಭಿಸಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಸಂಘವು ರೂ. ೪೦,೫೫,೧೯೫ ಲಾಭಗಳಿಸಿದೆ. ಒಟ್ಟು ೧,೫೭೬ ಸದಸ್ಯರಿದ್ದು, ಪಾಲು ಬಂಡವಾಳ ರೂ. ೧,೧೪,೮೦,೦೩೫ ರಷ್ಟಿದೆ. ಸದಸ್ಯತ್ವ ಪಡೆಯದೇ ಇರುವವರನ್ನು ಸದಸ್ಯರನ್ನಾಗಿಸುವ ಮೂಲಕ ಪಾಲು ಬಂಡವಾಳವನ್ನು ಹೆಚ್ಚಿಸಲು ಶ್ರಮಿಸಲಾಗುತ್ತಿದೆ. ಪ್ರಸಕ್ತ ವರ್ಷ ರೂ. ೯೫ ಕೋಟಿ ವ್ಯವಹಾರ ನಡೆಸಿದ್ದು, ಮುಂದಿನ ವರ್ಷಾಂತ್ಯಕ್ಕೆ ರೂ. ೧೦೦ ಕೋಟಿ ವ್ಯವಹಾರ ನಡೆಸುವ ಗುರಿ ಹೊಂದಲಾಗಿದೆ ಎಂದರು.

ವರದಿ ಸಾಲಿನಲ್ಲಿ ೩೫೦ ಮಂದಿ ಸದಸ್ಯರಿಗೆ ಕೆಸಿಸಿ ಸಾಲ ನೀಡಲಾಗಿದೆ. ಸರ್ಕಾರದ ನೂತನ ಆದೇಶದಂತೆ ಎಲ್ಲಾ ರೈತರು ಫ್ರೂಟ್ಸ್ ತಂತ್ರಾAಶದಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಸರ್ಕಾರದ ಶೂನ್ಯ ಬಡ್ಡಿದರ ಸೌಲಭ್ಯವನ್ನು ಹೊಂದಿಕೊಳ್ಳಬೇಕು ಎಂದು ನಾಪಂಡ ಉಮೇಶ್ ಮನವಿ ಮಾಡಿದರು.

ಇದರೊಂದಿಗೆ ಸಂಘದ ಮೂಲಕ ಜಾಮೀನು ಸಾಲ, ಆಭರಣ ಸಾಲ, ಸ್ವ-ಸಹಾಯ ಗುಂಪುಗಳಿಗೆ ಸಾಲ, ವಾಹನ ಹಾಗೂ ಯಂತ್ರೋಪಕರಣ ಖರೀದಿ ಸಾಲ, ಕೃಷಿಯೇತರ ಸಾಲ, ಮಧ್ಯಮಾವಧಿ ಸಾಲ, ಗೊಬ್ಬರ ಸಾಲ, ಠೇವಣಿ ಆಧಾರಿತ ಸಾಲ, ವೇತನ ಆಧಾರಿತ ಸಾಲ, ವ್ಯಾಪಾರಾಭಿವೃದ್ಧಿ ಸಾಲಗಳನ್ನು ನೀಡಲಾಗುತ್ತಿದ್ದು, ಸದಸ್ಯರುಗಳು ಸಾಲವನ್ನು ನಿಗದಿತ ಉದ್ದೇಶಕ್ಕೆ ಬಳಸುವ ಮೂಲಕ ಆರ್ಥಿಕವಗಿ ಅಭಿವೃದ್ಧಿ ಸಾಧಿಸಬೇಕೆಂದು ಕಿವಿಮಾತು ಹೇಳಿದರು.

ವರದಿ ಸಾಲಿನಲ್ಲಿ ಒಟ್ಟು ರೂ. ೧೭,೩೮,೩೫,೯೫೦ ಸಾಲ ನೀಡಲಾಗಿದ್ದು, ಸಾಲ ವಸೂಲಾತಿ ಶೇ. ೯೯.೧೪ ರಷ್ಟಿದೆ. ಸದಸ್ಯರು ಸಂಘದಿAದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರ ಸಂಘದ ಉಳಿವಿಗೆ ಮುಂದಾಗ ಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿAದ ತಾಲೂಕಿನಲ್ಲಿಯೇ ಉತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಗೆ ಮಾದಾಪುರ ಸಹಕಾರ ಸಂಘ ಭಾಜನವಾಗಿದ್ದು, ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ ಅವರನ್ನು ಸಂಘದ ಪರವಾಗಿ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ನಿರ್ದೇಶಕರುಗಳು ಸನ್ಮಾನಿಸಿದರು.

ಮಹಾಸಭೆಯಲ್ಲಿ ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸಿ.ಎಸ್. ಪವಿತ್ರ, ನಿರ್ದೇಶಕರುಗಳಾದ ಬಿ.ಎ. ಮೊಣ್ಣಪ್ಪ, ಸಿ.ಎ. ತಮ್ಮಯ್ಯ, ಪಿ.ಪಿ. ತಿಲಕ್‌ಕುಮಾರ್, ಕೆ.ಕೆ. ಕುಟ್ಟಪ್ಪ, ಎಂ.ಬಿ. ತಿಮ್ಮಯ್ಯ, ಎಂ.ಕೆ. ದೇಚಮ್ಮ, ಕೆ.ಎ. ಲತೀಫ್, ಎನ್.ಕೆ. ಭವಿನ್, ಎಂ.ಆರ್. ಗಿರೀಶ್, ಹೆಚ್.ಈ. ಭೀಮಯ್ಯ, ಎಂ.ವೈ. ಕೇಶವ, ವೃತ್ತಿಪರ ನಿರ್ದೇಶಕ ಟಿ.ಆರ್. ಪವನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ಕಾವೇರಪ್ಪ ಅವರುಗಳು ಉಪಸ್ಥಿತರಿದ್ದರು.