*ಸಿದ್ದಾಪುರ, ಸೆ. ೨೬: ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯ ಕಾಮಗಾರಿಯಲ್ಲಿ ನಿಯಮ ಉಲ್ಲಂಘಿಸಿರುವ ವೀರಾಜಪೇಟೆ ತಾಲೂಕಿನ ಹಾಲುಗುಂದ ಗ್ರಾ.ಪಂ. ವಿರುದ್ಧ ಜಿ.ಪಂ.ಯ ಓಂಬುಡ್ಸ್ಮನ್ ಕಾರ್ಯಾಲಯ ತನಿಖೆ ಪೂರ್ಣಗೊಳಿಸಿ ಕಾಮಗಾರಿಗೆ ಖರ್ಚು ಭರಿಸಿರುವ ವೆಚ್ಚ ರೂ. ೬೫,೪೧೨ನ್ನು ವಸೂಲಿ ಮಾಡಿ ಸಂಬAಧಪಟ್ಟ ಲೆಕ್ಕಶೀರ್ಷಿಕೆಗೆ ಜಮಾ ಮಾಡಲು ಗ್ರಾ.ಪಂ ಪ್ರಮುಖರಿಗೆ ಸೂಚನೆ ನೀಡಿದೆ.

ಹಾಲುಗುಂದ ಗ್ರಾ.ಪಂ ವ್ಯಾಪ್ತಿಯ ಗಾಡಿಮಾಳ ರಸ್ತೆಯ ಬಳಿ ತೋಡಿನ ಹೂಳು ತೆಗೆಯಲು ಉದ್ಯೋಗಖಾತ್ರಿ ಯೋಜನೆಯಡಿ ರೂ.೧ ಲಕ್ಷ ಮೀಸಲಿಡಲಾಗಿತ್ತು. ಉದ್ಯೋಗಖಾತ್ರಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆನ್ನುವ ನಿಯಮವಿದ್ದರೂ ಅಸ್ಸಾಂ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ನಿಯಮ ಉಲ್ಲಂಘಿಸಿರುವ ಬಗ್ಗೆ ಹಾಲುಗುಂದ ಗ್ರಾಮದ ನಿವಾಸಿ ಪಿ.ಎಸ್.ಹರೀಶ್ ಅವರು ಓಂಬುಡ್ಸ್ಮನ್ ಕಾರ್ಯಾಲಯಕ್ಕೆ ದೂರು ನೀಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

ಈ ಕುರಿತು ತನಿಖೆ ನಡೆಸಿದ ಸಂಸ್ಥೆ ವಿಚಾರಣೆಗೆ ಗ್ರಾ.ಪಂ ಪ್ರಮುಖರು ನಿರಂತರವಾಗಿ ಗೈರು ಹಾಜರಾಗುತ್ತಿದ್ದ ಹಿನ್ನೆಲೆ ಆರೋಪ ನಿಜವೆಂದು ಪರಿಗಣಿಸಿ ಡ್ರಾ ಮಾಡಿದ ಹಣ ರೂ.೬೫,೪೧೨ ನ್ನು ಮರಳಿ ಭರಿಸಬೇಕೆಂದು ಸೂಚನೆ ನೀಡಿದೆ. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕಾಂಚನ ಅವರು ರೂ.೧೭,೫೯೪, ಮತ್ತೊಬ್ಬ ಅಭಿವೃದ್ಧಿ ಅಧಿಕಾರಿ ಉಜ್ಮಾ ಜಬೀನ್ ೧೦,೨೦೭, ಗ್ರಾ.ಪಂ ಅಧ್ಯಕ್ಷ ದಿನೇಶ್ ಪಿ.ಎ ೯,೮೧೧ ಹಾಗೂ ವೀರಾಜಪೇಟೆ ತಾಲೂಕು ಪಂಚಾಯ್ತಿ ತಾಂತ್ರಿಕ ಸಹಾಯಕ ಇಂಜಿನಿಯರ್ ಆಶಿಕಾ ಅವರು ೨೭,೮೦೦ ನ್ನು ಭರಿಸಬೇಕೆಂದು ಆದೇಶಿಸಿದೆ.ಕಾಮಗಾರಿ ಪೂರ್ಣಗೊಳಿಸಿರುವ ಕಡತದ ಫೋಟೋಗಳಲ್ಲಿರುವ ಕಾರ್ಮಿಕರಿಗೂ ಮತ್ತು ವಿಚಾರಣೆ ವೇಳೆ ಹೇಳಿಕೆ ನೀಡಿದ ಕಾರ್ಮಿಕರಿಗೂ ಹೋಲಿಕೆಯಾಗದೆ ಇರುವುದು ತನಿಖೆಯಿಂದ ತಿಳಿದು ಬಂದಿದೆ.

ಮಾರ್ಗಸೂಚಿಯನ್ನು ಉಲ್ಲಂಘಿಸಿ ಜಾಬ್‌ಕಾರ್ಡ್ ಹೊಂದಿರದ ಕೂಲಿ ಕಾರ್ಮಿಕರನ್ನು ತೊಡಗಿಸಿಕೊಂಡಿರುವುದು ಕಾರ್ಯನಿರ್ವಾಹಕ ಅಧಿಕಾರಿಯ ತನಿಖಾ ವರದಿಯಿಂದ ದೃಢಪಟ್ಟಿದೆ. ಎದುರುದಾರರ ವಾದ- ಹೇಳಿಕೆ ಅಸಮಂಜಸ ಮತ್ತು ನ್ಯಾಯ ಸಮೃತವಾಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಂದಾಜುಪಟ್ಟಿಯ ಪ್ರಕಾರ ಈ ಕಾಮಗಾರಿಗೆ ರೂ.೧ಲಕ್ಷಗಳನ್ನು ನಿಗದಿಪಡಿಸಿದ್ದು, ರೂ.೬೫,೪೧೨ ಖರ್ಚು ಭರಿಸಲಾಗಿದೆ. ಗ್ರಾಮ ಪಂಚಾಯಿತಿಯವರು ನಮೂನೆ ೬, ೮ ಮತ್ತು ೯ ನ್ನು ಕೃತಕವಾಗಿ ತಯಾರಿಸಿರುವುದು ಕಾರ್ಯನಿರ್ವಾಹಕ ಅಧಿಕಾರಿಯವರ ವರದಿಯಿಂದ ದೃಢಪಟ್ಟಿದೆ. ಕಾಮಗಾರಿಗೆ ಸಂಬAಧಿಸಿದAತೆ ೧೦ ಎನ್‌ಎಂಆರ್‌ಗಳಲ್ಲಿ ಹಣ ಪಡೆಯಲಾಗಿದೆ. ಸಾಮಾಗ್ರಿ ವೆಚ್ಚ ಪಾವತಿಸಿರುವುದಿಲ್ಲ. ಕಡತದಲ್ಲಿರುವ ಫೋಟೋಗಳಿಗೂ ಹಾಗೂ ಸ್ಥಳ ಪರಿಶೀಲನೆಯಲ್ಲಿ ಹೇಳಿಕೆ ನೀಡಿರುವ ಕಾರ್ಮಿಕರ ಫೋಟೊಗಳಿಗೂ ಒಂದಕ್ಕೊAದು ತಾಳೆಯಾಗುವುದಿಲ್ಲ. ಸದರಿ ಕಾಮಗಾರಿಯನ್ನು ಜಾಬ್‌ಕಾರ್ಡ್ ಹೊಂದಿರದ ಕಾರ್ಮಿಕರಿಂದ ನಿರ್ವಹಿಸಿರುವುದು ಮೇಲ್ನೋಟಕ್ಕೆ ಕಂಡುಬAದಿರುವುದರಿAದ ಕಾಮಗಾರಿಗೆ ಖರ್ಚು ಭರಿಸಿರುವ ವೆಚ್ಚ ರೂ.೬೫,೪೧೨ನ್ನು ವಸೂಲಿ ಮಾಡಿ ಸಂಬAಧಪಟ್ಟ ಲೆಕ್ಕಶೀರ್ಷಿಕೆಗೆ ಜಮಾ ಮಾಡಲು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ.

-ಅಂಚೆಮನೆ ಸುಧಿ