ಮಡಿಕೇರಿ, ಸೆ. ೨೬: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಪಾಲುದಾರರ ಸಹಕಾರದಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ತಾ.೩೦ ರಂದು ಬೆಳಿಗ್ಗೆ ೧೦:೩೦ ಗಂಟೆಗೆ ಮಡಿಕೇರಿಯ ಆಕ್ಸಿರಿಚ್ ಹೊಟೇಲ್‌ನಲ್ಲಿ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ಸುಸ್ಥಿರ ಪ್ರವಾಸೋದ್ಯಮ - ಖಿಡಿಚಿveಟ ಜಿoಡಿ ಟiಜಿe ಪೋಸ್ಟರ್ ಬಿಡುಗಡೆ ಮಾಡಲಾಗುವುದು.

ಶೂನ್ಯ ತ್ಯಾಜ್ಯ ಪ್ರವಾಸ ಜಾಗೃತಿಗೆ ಚಾಲನೆ ನೀಡಲಾಗುವುದು. ಮೈಸೂರು ಫುಡ್ ಕ್ರಾಫ್ಟ್ ಇನ್ಸಿ÷್ಟಟ್ಯೂಟ್ ಪ್ರಾಂಶುಪಾಲ ಡಾ.ಎಸ್ ಕಣ್ಣನ್ ಅವರು ಜಿಲ್ಲೆಯ ಹೋಂ ಸ್ಟೇ ಮಾಲೀಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಪರಿಸರ ಮತ್ತು ಸುಸ್ಥಿರ ಪ್ರವಾಸ - ಓeeಜ oಜಿ ಣhe houಡಿ ಬಗ್ಗೆ ಗ್ರೀನ್ ಪಾತ್ ಸಂಸ್ಥೆಯ ಜಯರಾಮ್ ಹೆಚ್.ಆರ್ ಅವರು ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭ ಜಿಲ್ಲೆಯ ವಿವಿಧ ಹೊಟೇಲ್ ಗಳಲ್ಲಿ ಅಳವಡಿಸಿರುವ 'ಃesಣ Susಣಚಿiಟಿಚಿbಟe Pಡಿಚಿಛಿಣiಛಿes' ಗಳ ಬಗ್ಗೆ ಪ್ರಸ್ತುತಿ ಪಡಿಸಲಾಗುವುದು.