ಮಡಿಕೇರಿ, ಸೆ. ೨೬: ನಂ. ೩೨೩೦೨ನೇ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ೨೩ನೇ ವಾರ್ಷಿಕ ಮಹಾಸಭೆ ನಗರದ ಕೊಹಿನೂರು ರಸ್ತೆಯಲ್ಲಿನ ಸಂಘದ ಸ್ವಂತ ಕಟ್ಟಡದ ಸಭಾಂಗಣ ದಲ್ಲಿ ಸಂಘದ ಅಧ್ಯಕ್ಷ ಕೆ.ಕೆ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಗೆ ಮಾಹಿತಿ ನೀಡಿದ ಶ್ರೀನಿವಾಸ್ ಅವರು, ಸಂಘದಲ್ಲಿ ಒಟ್ಟು ೧೮೬೨ ಸದಸ್ಯರಿದ್ದು, ಈ ಪೈಕಿ ೮೯೮ ಸದಸ್ಯರು ಪೂರ್ಣ ಮುಖ ಬೆಲೆ ಷೇರು ಮೊತ್ತವನ್ನು ಪಾವತಿಸಿದ್ದು, ಉಳಿದ ೯೬೪ ಸದಸ್ಯರ ಪಾಲುಗಳ ಮುಖ ಬೆಲೆಯು ಅಪೂರ್ಣವಾಗಿದೆ ಎಂದು ಮಾಹಿತಿ ನೀಡಿದರು. ಸಂಘದ ಸದಸ್ಯರಿಂದ ಒಟ್ಟು ರೂ. ೮೨,೬೭,೫೦೦ ಪಾಲು ಬಂಡವಾಳ ಸಂಗ್ರಹವಾಗಿದೆ. ಸಂಘದಲ್ಲಿ ಅಡಮಾನ ಸಾಲ, ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಓವರ್‌ಡ್ರಾಫ್ಟ್ ಸಾಲ ಮತ್ತು ಸಿಬ್ಬಂದಿಗಳಿಗೆ ಆಸಾಮಿ ಸಾಲ ನೀಡಲಾಗುತ್ತಿದೆ. ತಾ. ೩೧.೦೩.೨೪ ರ ಅಂತ್ಯಕ್ಕೆ ವಿವಿಧ ಠೇವಣಾತಿಗಳಿಂದ ರೂ. ೨೪,೪೬,೯೬,೭೮೭ ಠೇವಣಾತಿ ಸಂಗ್ರಹಿಸಲಾಗಿದೆ ಹಾಗೂ ರೂ. ೯,೫೫,೪೩,೧೦೦ ರಷ್ಟು ಹಣವನ್ನು ವಿವಿಧ ಸಾಲಗಳ ಮೂಲಕ ನೀಡಲಾಗಿದೆ. ಸಂಘವು ೨೦೦೬-೦೭ನೇ ಸಾಲಿನಿಂದ ಲಾಭದಲ್ಲಿ ನಡೆಯುತ್ತಿದೆ. ತಾ. ೩೧-೦೩-೨೪ ರ ಅಂತ್ಯಕ್ಕೆ ಸಂಘವು ೧೨,೦೦,೦೦೯ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.

೨೦೧೪-೧೫ ನೇ ಸಾಲಿನಲ್ಲಿ ಇಲಾಖಾ ಅನುಮತಿ ಪಡೆದು ಮಡಿಕೇರಿ ನಗರದ ಕೊಹಿನೂರು ರಸ್ತೆಯಲ್ಲಿ ಸಂಘಕ್ಕೆ ಒಂದು ಸಂಘದ ಸ್ವಂತ ಕಟ್ಟಡವನ್ನು ಖರೀದಿಸಲಾಗಿದೆ. ಹಾಗೂ ೨೦೧೬-೧೭ನೇ ಸಾಲಿನಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರು, ಮೈಸೂರು - ಇವರ ಅನುಮತಿ ಪಡೆದು, ಸಂಘದ ಸದಸ್ಯರ ಸಹಕಾರದೊಂದಿಗೆ ಈ ಹಿಂದೆ ಇದ್ದ ಕಟ್ಟಡದ ಮೇಲೆ ಇನ್ನೊಂದು ಅಂತಸ್ಥನ್ನು ನಿರ್ಮಾಣ ಮಾಡಲಾಗಿದೆ. ಸಂಘದ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಸ್ತುತ ಈ ಕಟ್ಟಡವನ್ನು ಸಭೆ ಸಮಾರಂಭಗಳಿಗೆ ಬಾಡಿಗೆಗೆ ನೀಡಲಾಗುತ್ತಿದೆ ಎಂದರು.

ಸAಘದ ಸದಸ್ಯರಿಗೆ ಅನುಕೂಲ ವಾಗುವ ದೃಷ್ಟಿಯಿಂದ ೨೦೦೭ನೇ ಡಿಸೆಂಬರ್ ತಿಂಗಳಲ್ಲಿ ಕುಶಾಲ ನಗರದಲ್ಲಿ ಹಾಗೂ ೨೦೧೨ ರಲ್ಲಿ ಸಿದ್ದಾಪುರದಲ್ಲಿ ಸಂಘದ ಒಂದೊAದು ಶಾಖೆಯನ್ನು ಪ್ರಾರಂಭಿಸಲಾಗಿದೆ. ಎರಡೂ ಶಾಖೆಗಳ ವ್ಯವಹಾರವು ಚೆನ್ನಾಗಿ ನಡೆಯುತ್ತಿದೆ. ಸಂಘದಲ್ಲಿ ಒಟ್ಟು ೧೯ ಜನ ಪಿಗ್ಮಿ ಸಂಗ್ರಹಗಾರರು ಜಿಲ್ಲೆಯ ಹಲವು ಕಡೆಗಳಲ್ಲಿ ದಿನನಿತ್ಯ ಪಿಗ್ಮಿ ಠೇವಣೆ ಸಂಗ್ರಹಿಸುತ್ತಿದ್ದಾರೆ. ಸಂಘದಲ್ಲಿ ನಿರಖು ಠೇವಣಿಗಳಿಗೆ ಇತರ ಎಲ್ಲಾ ಬ್ಯಾಂಕ್‌ಗಳಿಗಿAತಲೂ ಹೆಚ್ಚಿಗೆ ಬಡ್ಡಿ ದರವನ್ನು ನೀಡಲಾಗುತ್ತಿದೆ ಎಂದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ. ರಾಮಕೃಷ್ಣಯ್ಯ, ನಿರ್ದೇಶಕರು ಗಳಾದ ಕೆ.ಎಂ. ಗಣೇಶ್, ಕೆ.ಬಿ. ಗಿರೀಶ್ ಗಣಪತಿ, ಬಾಬು ಚಂದ್ರ ಉಳ್ಳಾಗಡ್ಡಿ, ಮುನೀರ್ ಅಹಮ್ಮದ್, ಎಂ.ಪಿ. ಕಾವೇರಪ್ಪ, ಚಂದ್ರಶೇಖರ್, ಎಂ. ಬಿಜಾಯ್, ಅನಿಲ್ ಹೆಚ್.ಕೆ., ಬಿ. ಜನಾರ್ಧನ ಪ್ರಭು, ಡೆನ್ನಿ ಬರೋಸ್, ಜಯಂತಿ ಎಸ್.ಎಂ., ನಾಗೇಶ್ ಕೆ.ಎಸ್. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ಯಾಮಲ ಟಿ.ಡಿ. ಉಪಸ್ಥಿತರಿದ್ದರು.