ಬೆಂಗಳೂರು, ಜ. ೨೪: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿಯನ್ನು ರಾಜ್ಯ ಉಚ್ಚ ನ್ಯಾಯಾಲಯ ವಜಾಗೊಳಿಸಿರುವ ಸಂಬAಧ ‘ಶಕ್ತಿ’ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೇ, ಒಂದು ವೇಳೆ ಸಲ್ಲಿಸುವುದಾದರೆ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸಲ್ಲಿಸುವುದೇ ಅಥವಾ ನೇರವಾಗಿ ಸುಪ್ರೀಂಕೋರ್ಟ್ಗೆ ಸಲ್ಲಿಸುವುದೇ ಎಂಬದರ ಬಗ್ಗೆ ಹಿರಿಯ ವಕೀಲರಾದ ಅಭಿಷೇಕ್ ಸಿಂಘ್ವಿ, ರವಿ ವರ್ಮ ಕುಮಾರ್ ಹಾಗೂ ತಾನು ಸೇರಿ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಕಾನೂನು ಕ್ರಮಕ್ಕೆ ನೀಡಿದ ಅನುಮತಿ ಕಾನೂನು ಬಾಹಿರ ಎಂಬ ನಮ್ಮ ಮಾತಿಗೆ ನಾವು ಇಂದಿಗೂ ಬದ್ಧರಾಗಿದ್ದೇವೆ. ಒಂದು ಪ್ರಕರಣದ ತೀರ್ಪು ಸುಪ್ರೀಂಕೋರ್ಟ್ ತೀರ್ಪಿನ ನಂತರವೇ ಕೊನೆಯಾಗುತ್ತದೆ. ನ್ಯಾಯಾಧೀಶರು, ಏಕ ಸದಸ್ಯ ಪೀಠ ಕೊಟ್ಟಂತಹ ಆದೇಶದ ಮೇಲೆ ನ್ಯಾಯಾಂಗ ಪ್ರಕ್ರಿಯೆ ಅಡಿಯಲ್ಲಿ ಮೇಲ್ಮನವಿ, ಪುನರ್ಪರಿಶೀಲನೆ, ಸರ್ವೋಚ್ಚ ನ್ಯಾಯಾಲಯಕ್ಕೆ ಸ್ಪೆಷಲ್ ರಿಟ್ ಪಿಟಿಶÀನ್ ಸಲ್ಲಿಸುವುದು ಈ ರೀತಿಯ ಹಲವಾರು ಕ್ರಮಗಳಿಗೆ ಅವಕಾಶವಿದೆ. ಇದರಲ್ಲಿ ಯಾವುದನ್ನು ಅನುಸರಿಸಬೇಕೆಂಬುದರ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಸಿಎಂ ಗಮನಕ್ಕೆ ತಂದು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಂವಿಧಾನದ ಮೇಲೆ ನಮಗೆ ಪೂರ್ಣ ವಿಶ್ವಾಸವಿದ್ದು, ಇದರ ಆಶ್ರಯದಲ್ಲಿ ಕೆಲಸ ಮಾಡುತ್ತೇವೆ. ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಪೊನ್ನಣ್ಣ ಹೇಳಿದರು.