ಗೋಣಿಕೊಪ್ಪ ವರದಿ, ಸೆ. ೨೪: ಹಿರಿಯ ನಾಗರಿಕ ವೇದಿಕೆ ಕುಟುಂಬದAತೆ ಕಾರ್ಯನಿರ್ವಹಿಸು ತ್ತಿದೆ ಎಂದು ಕಿಗ್ಗಟ್ನಾಡ್ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತಿರ ಪಿ. ಸೋಮಣ್ಣ ಹೇಳಿದರು.
ಇಗ್ಗುತ್ತಪ್ಪ ಸೌಹಾರ್ದ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಿಗ್ಗಟ್ನಾಡ್ ಹಿರಿಯ ನಾಗರಿಕ ವೇದಿಕೆ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ವಯಸ್ಸಿನಲ್ಲಿ ಹಿರಿಯರು ಸದಸ್ಯರಾಗಿ ಮುಂದುವರಿಯುತ್ತಿದ್ದೇವೆ. ಸಾರ್ವಜನಿಕರೊಂದಿಗೆ ಬೆರೆಯುವ ಮೂಲಕ, ಕಷ್ಟ ಸುಖಗಳಲ್ಲಿ ಭಾಗಿಯಾಗುವುದರೊಂದಿಗೆ ಕುಟುಂಬವಾಗಿ ಮುಂದುವರಿಯುತ್ತಿದ್ದೇವೆ. ವೇದಿಕೆಯಲ್ಲಿ ೨೧೬ ಸದಸ್ಯರಿದ್ದು, ಸಂಸ್ಕಾರಯುತ ಜೀವನ ರೂಪಿಸುವಂತಾಗಿದೆ ಎಂದರು.
ವೇದಿಕೆ ಜೀವಾವಧಿ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ವೇದಿಕೆಯಿಂದ ಸಾಮಾಜಿಕವಾಗಿ ಸಾಕಷ್ಟು ಕಾರ್ಯಕ್ರಮಗಳು ನಡೆದಿವೆ. ಪಾಲ್ಗೊಳ್ಳುವಿಕೆ ಮುಖ್ಯ ಎಂದರು.
ಪ್ರಧಾನ ಕಾರ್ಯದರ್ಶಿ ಚೇಂದಿರ ಎಂ. ಬೋಪಣ್ಣ ವಾರ್ಷಿಕ ವರದಿ ವಾಚಿಸಿದರು. ೯೦ ವಯಸ್ಸು ಮೀರಿದ ಹಿರಿಯರನ್ನು ಗೌರವಿಸುವ ಕಾರ್ಯ ಮಾಡಲಾಗಿದೆ. ಇದರಿಂದ ಹಿರಿಯರ ಮಾನಸಿಕ ಮತ್ತು ದೈಹಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು. ವಿದ್ಯಾನಿಧಿ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಲಾಯಿತು.
ಉಪಾಧ್ಯಕ್ಷ ಮಂಡೆಚAಡ ಗಣೇಶ್ ಗಣಪತಿ, ಜಂಟಿ ಕಾರ್ಯದರ್ಶಿ ದೇಯಂಡ ಎಂ. ಕಾವೇರಮ್ಮ, ಖಜಾಂಚಿ ಐನಂಡ ಕೆ. ಮಂದಣ್ಣ, ಆಂತರಿಕ ಲೆಕ್ಕ ಪರಿಶೋಧಕ ಬೊಳ್ಳಿಯಂಡ ದಾದು ಪೂವಯ್ಯ ಇದ್ದರು. ಛಾಯಾ ಪ್ರಾರ್ಥಿಸಿದರು.
ಸನ್ಮಾನ ; ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಾದ ಮಾನ್ಯ, ಮಾಹಿತ್ ಪೂಣಚ್ಚ, ಕುಶಾಲಪ್ಪ, ಎಸ್ಎಸ್ಎಲ್ಸಿಯಲ್ಲಿ ಕೆ.ಡಿ. ಭಾಷಿತಾ, ಎ.ಜಿ. ದೃತಿ ಸನ್ಮಾನ ಸ್ವೀಕರಿಸಿದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ನಿವೃತ್ತ ಮುಖ್ಯಸ್ಥ ಡಾ. ಚೆಪ್ಪುಡಿರ ಜಿ. ಕುಶಾಲಪ್ಪ, ಹಿರಿಯರಾದ ಬೊವ್ವೇರಿಯಂಡ ಮೊಣ್ಣಪ್ಪ, ಚೆಕ್ಕೆರ ಕೆ. ಪೆಮ್ಮಯ್ಯ, ಕೋಲತಂಡ ಜಿ. ಕುಟ್ಟಪ್ಪ, ಪುಳ್ಳಂಗಡ ಸಾಕಮ್ಮ ಸನ್ಮಾನ ಸ್ವೀಕರಿಸಿದರು.