ಚೆಟ್ಟಳ್ಳಿ, ಸೆ. ೨೪: ಚೆಟ್ಟಳ್ಳಿ ಕಂಡಕರೆಯಲ್ಲಿ ಸಂಭ್ರಮದ ಈದ್ ಮಿಲಾದ್ ಹಬ್ಬವನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಮಹಲ್ ಕತಿಬ್ ಮುಸ್ತಫಾ ಸಖಾಫಿ ಉದ್ಘಾಟನೆ ಮಾಡಿ ಮಾತನಾಡಿದರು.

ಈದ್ ಮಿಲಾದ್ ಜಾಥಾವನ್ನು ಮಹಲ್ ಅಧ್ಯಕ್ಷ ಅಬ್ದುಲ್ ಗಫರ್ ಕೆ.ಹೆಚ್. ಧ್ವಜಾರೋಹಣ ಮಾಡುವ ಮುಖಾಂತರ ಚಾಲನೆ ನೀಡಿದರು. ಕಂಡಕರೆ ಮದರಸ ಮುಂಭಾಗದಿAದ ಕಾಫಿ ಬೋರ್ಡ್ವರೆಗೆ ಈದ್ ಮಿಲಾದ್ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಜಾಥಾದಲ್ಲಿ ಮಕ್ಕಳ ಆಕರ್ಷಕ ದಫ್ ನೋಡುಗರ ಪ್ರಮುಖ ಆಕರ್ಷಣೆಯಾಗಿತ್ತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಅತಿ ವಿಜೃಂಭಣೆಯಿAದ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮಹಲ್ ಕಾರ್ಯದರ್ಶಿ ಮಹಮ್ಮದ್ ರಫಿ ಮೀಲಾದ್ ಸಮಿತಿ ಅಧ್ಯಕ್ಷ ಯುಸಫ್ ಕೆ.ಎಂ. ಮಿಲಾದ್ ಹಾಜರಿದ್ದರು. ಸಮಿತಿ ಕಾರ್ಯದರ್ಶಿ ಅಭಿದ್ ಹೆಚ್.ಎ. ಸ್ವಾಗತವನ್ನು ಕೋರಿದರು. ಕಾರ್ಯಕ್ರಮದಲ್ಲಿ ಜಮಾಅತ್ ಸಮಿತಿ ಸದಸ್ಯರು ಮಿಲಾದ್ ಸಮಿತಿ ಸದಸ್ಯರು, ಸಲಾತ್ ಕಮಿಟಿ ಪ್ರಮುಖರು, ಜಮಾಅತ್ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಚೆಟ್ಟಳ್ಳಿ ಉಪ ಠಾಣಾಧಿಕಾರಿ ದಿನೇಶ್, ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.