*ಗೋಣಿಕೊಪ್ಪ, ಸೆ. ೨೩: ಸರ್ಕಾರಿ ಬಸ್ ಹಾಗೂ ಲಾರಿ ನಡುವೆ ಗೋಣಿಕೊಪ್ಪ ಬಳಿಯ ಸೀಗೆತೋಡುವಿನಲ್ಲಿ ಅಪಘಾತ ಸಂಭವಿಸಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಐವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗೋಣಿಕೊಪ್ಪ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಬಸ್ ಚಾಲಕ ಸಂತೋಷ್ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಬಸ್ಸ್ನಲ್ಲಿದ್ದ ಸುಮಾರು ೪೦ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರು ಮಾರ್ಗದಿಂದ ಗೋಣಿಕೊಪ್ಪಕ್ಕೆ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿದ್ದ ಸಂದರ್ಭ ಸೀಗೆತೋಡು ಸೇತುವೆಯ ಸಮೀಪ ಲಾರಿ ಬಂದಿದೆ. ಇದೇ ವೇಳೆ ಸೇತುವೆ ಸಮೀಪ ಮತ್ತೊಂದು ಲಾರಿ ಮರದ ದಿಮ್ಮಿಗಳನ್ನು ತುಂಬುತ್ತಿದ್ದ ಕಾರಣದಿಂದ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಇಕ್ಕಟ್ಟು ಉಂಟಾಗಿ ಎದುರಿನಿಂದ ಬರುವ ಲಾರಿಗೆ ಮಾರ್ಗ ಬಿಡಲು ಬಸ್ ಚಾಲಕ ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಲಾರಿ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

(ಮೊದಲ ಪುಟದಿಂದ) ಸೇತುವೆ ಸಮೀಪ ಮರದ ದಿಮ್ಮಿಗಳನ್ನು ತಂದು ಲಾರಿಗಳಿಗೆ ತುಂಬಿಸುವುದರಿAದ ಈ ಭಾಗಗಳಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆ. ಈ ಸ್ಥಳದಲ್ಲಿ ಮರದ ದಿಮ್ಮಿಗಳನ್ನು ಸಂಗ್ರಹಿಸಿ ಲಾರಿಗಳಿಗೆ ತುಂಬಲು ಅವಕಾಶ ನೀಡಬಾರದೆಂದು ಸಾರ್ವಜನಿಕರು ಸ್ಥಳೀಯ ಗ್ರಾಮ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.

-ಎನ್.ಎನ್. ದಿನೇಶ್, ಚೆನ್ನನಾಯಕ